Mandya | ಸಂಸದೆ ಸುಮಲತಾ ಫೋಟೋಶೂಟ್ – ಕ್ರಮಕ್ಕೆ ಶ್ರೀಕಂಠಯ್ಯ ಆಗ್ರಹ
ಮಂಡ್ಯ : KRS ಡ್ಯಾಂ ಮೇಲೆ ಬೆಂಬಲಿಗರೊಂದಿಗೆ ಫೋಟೊ ಶೂಟ್ ಮಾಡಿಸಿದ ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಕಾನೂನು ಕ್ರಮಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಶಾಸಕರು, ಸಂಸದರ ಪೋಟೋ ಶೂಟ್ ನೋಡಿದ್ದೇನೆ. ಭಾರತ ದೇಶದ ಬಾವುಟ ಹಿಡಿದು ಬಹಳ ಅಭಿಮಾನ, ಪ್ರೀತಿ ತೋರಿಸಿದ್ದಾರೆ.
ಬೇರೆ ಯಾರಾದ್ರು ಆಗಿದ್ರೆ ಇಷ್ಟೊತ್ತಿಗೆ FIR ಆಗ್ತಿತ್ತು. ಸಂಸದರು ಅನ್ನೋ ಕಾರಣಕ್ಕೆ ಫೋಟೊ ಶೂಟ್ ಗೆ ಅವಕಾಶ ಕೊಡುವುದು ಸರಿಯಲ್ಲ.
ಡ್ಯಾಂ ಮೇಲೆ ವೈಯುಕ್ತಿಕ ಫೋಟೋ ಶೂಟ್ ಮಾಡಿದ್ದಾರೆ. ಜೊತೆಗೆ ಬಾಗಿನ ಬಿಟ್ಟಿದ್ದಾರೆ. ಬಾಗಿನ ಅರ್ಪಿಸುವುದು ಒಂದೇ ಸಲ.
ಎರಡನೇ ಬಾರಿ ಬಾಗಿನ ಅರ್ಪಿಸುವುದು ನಮ್ಮ ಸಂಪ್ರದಾಯದಲ್ಲಿಲ್ಲ. ಕಾನೂನು ಪ್ರಕಾರವಾದ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ, ಬಡವರ್ಗಕ್ಕೂ, ಸಾಮಾನ್ಯ ವರ್ಗಕ್ಕೂ ಒಂದೇ. ಎಂಪಿ, ಎಂಎಲ್ಎ ಎಲ್ಲರಿಗೂ ಕಾನೂನು ಒಂದೇ. ಊರಿಗೆಲ್ಲ ಬುದ್ದಿ ಹೇಳುವವರು, ದಿನ ಬೆಳಿಗ್ಗೆ ಈ ಕೆಲಸ ಮಾಡ್ತಾರೆ.
ಮಳೆ ಬಿದ್ದು ಎಷ್ಟೊ ದಿನದ ಮೇಲೆ ಮಂಡ್ಯ-ಮದ್ದೂರಿಗೆ ಭೇಟಿ ಮಾಡ್ತಾರೆ. ನೀರು ತುಂಬಿದಾಗ, ಜನ ಸಂಕಷ್ಟದಲ್ಲಿದ್ದಾಗ ಜನರ ಕಷ್ಟ ಕೇಳಿಲ್ಲ.
KRSನಲ್ಲಿ ಕಾರ್ಯಗಾರ ನಡೆದಾಗ ಡೆಲ್ಲಿಲ್ಲಿದ್ದೆ ಅಂತ ಸುಳ್ಳು ಹೇಳ್ತಾರೆ. KRS ಡ್ಯಾಂ ಭದ್ರತೆ ಬಗ್ಗೆ ಸರ್ಕಾರ ಕಾರ್ಯಾಗಾರ ಮಾಡಿತ್ತು.
ಮಂತ್ರಿಗಳು ಎಲ್ಲ ಬಂದು ಕುಳಿತುಕೊಂಡಿದ್ದರು. ಆ ದಿನ ಸಂಸದರು ಬೆಂಗಳೂರಲ್ಲೆ ಇದ್ದರು ಎಂದು ಕಿಡಿಕಾರಿದ್ದಾರೆ.