Mandya | ಕೆ.ಆರ್.ಎಸ್ ಡ್ಯಾಂ ಭರ್ತಿಗೆ 3 ಅಡಿ ಮಾತ್ರ ಬಾಕಿ
ಮಂಡ್ಯ : ಕಾವೇರಿ ಜಲಾಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆ.ಆರ್.ಎಸ್ ಡ್ಯಾಂಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಹೀಗಾಗಿ ಕೆ.ಆರ್.ಎಸ್ ಭರ್ತಿಗೆ ಇನ್ನು 3 ಅಡಿ ಮಾತ್ರ ಬಾಕಿ ಇದೆ.
KRS ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸದ್ಯ ಡ್ಯಾಂ ನಲ್ಲಿ 121.41 ಅಡಿ ನೀರು ಸಂಗ್ರಹವಾಗಿದೆ.
ಇಂದಿನ ಒಳ ಹರಿವಿನ ಪ್ರಮಾಣ 34,304 ಕ್ಯೂಸೆಕ್ ರಷ್ಟಿದ್ದು, ಹೊರ ಹರಿವಿನ ಪ್ರಮಾಣ 5792 ಕ್ಯೂಸೆಕ್ ರಷ್ಟಿದೆ.
49.452 ಟಿಎಂಸಿ ಸಾಮರ್ಥದ ಡ್ಯಾಂನಲ್ಲಿ 44.873 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನ 2-3 ಮೂರು ದಿನದಲ್ಲಿ ಕೆ.ಆರ್.ಎಸ್ ಡ್ಯಾಂ ಸಂಪೂರ್ಣ ಭರ್ತಿ ಸಾಧ್ಯತೆ ಇದೆ.
ಇತ್ತ ಕೆ.ಆರ್ ಎಸ್ ಡ್ಯಾಂ ಭರ್ತಿ ಆಗುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಮತ್ತೊಂದು ಕಡೆ ಮಳೆ ಮುಂದುವರೆದು, ಡ್ಯಾಂನಿಂದ ಹೊರಹರಿವು ಪ್ರಮಾಣ ಹೆಚ್ಚಾದ್ರೆ ಆಗುವ ಅನಾಹುತಗಳ ಬಗ್ಗೆ ಜನರಲ್ಲಿ ಆತಂಕ ಕೂಡ ಇದೆ.
ಈಗಾಗಲೇ ಕಾವೇರಿ ನೀರಾವರಿ ನಿಗಮದಿಂದ ಕಾವೇರಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಯಾವುದೇ ಕ್ಷಣದಲ್ಲಾದರು ಜಲಾಶಯದಿಂದ ನೀರು ಹೊರ ಬಿಡಬಹುದು.
ನದಿ ದಡದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.