Mandya : ಬಾಲಕಿ ಮೇಲೆ ಅತ್ಯಾಚಾರವೆಸಗಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯ..
ಇತ್ತೀಚೆಗೆ ಲಹ್ ಜಿಹಾದಿಯಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ..
ಇದೀಗ ಮಂಡ್ಯದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ..
ವಿಕಲ ಚೇತನ ಬಾಲಕಿಯ ಮೇಲೆ ಮುಸ್ಲಿಂ ಯುವಕನೋರ್ವ ಅತ್ಯಾಚಾರವೆಸಗಿ , ಆಕೆ ಮತಾಂತರವಾಗಲು ಒಪ್ಪಿದರಷ್ಟೇ ಮದುವೆಯಾಗೋದಾಗಿ ಹೇಳಿದ್ದಾನೆ..
24 ವರ್ಷದ ಜಿಹಾದಿ ಯೂನಸ್ ಪಾಷ ಎಂಬತಾ ನಾಗಮಂಗಲದ 13 ವರ್ಷದ ವಿಕಲಚೇತನ ಬಾಲಕಿಯನ್ನು ಪುಸಲಾಯಿಸಿ ಮೊಬೈಲ್ ಕೊಡಿಸಿದ್ದಾನೆ. ಬಳಿಕ ಮೆಸೆಜ್ ಮಾಡಲು ಆರಂಭಿಸಿದ್ದು ವಿಡಿಯೋ ಕಾಲ್ ಮಾಡುತ್ತಾ ಆಕೆ ಜೊತೆಗೆ ಸಂಪರ್ಕದಲ್ಲಿದ್ದ..
ವಿಡಿಯೋ ಕಾಲ್ ಮಾಡಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಅಲ್ಲದೆ ತನ್ನ ಖಾಸಗಿ ಅಂಗವನ್ನು ತೋರಿಸುವಂತೆ ಧಮ್ಕಿ ಹಾಕಿ ಖಾಸಗಿ ಅಂಗವನ್ನು ತೋರಿಸಿದಾಗ ಮತ್ತೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಮತ್ತೆ ಅದನ್ನೂ ವೈರಲ್ ಮಾಡುವ ಧಮ್ಕಿ ಹಾಕಿ ಲೈಂಗಿಕ ಕ್ರಿಯೆಗೆ ಸಮ್ಮತಿಸುವಂತೆ ಒತ್ತಡ ಹೇರಿದ್ದಾನೆ..
ಬಾಲಕಿಯ ತಾಯಿ, ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಲು ಒತ್ತಾಯಿಸಿ ಸಂತ್ರಸ್ಥೆ ಕೈಗೆ ನಿದ್ದೆ ಮಾತ್ರೆ ಕೊಟ್ಟು ಊಟದಲ್ಲಿ ಬೆರಸುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ.
ಹೀಗೆ ಬಾಲಕಿ ಕೈಗೆ ನಿದ್ದೆ ಬರಿಸುವ ಮಾತ್ರೆ ಕೊಟ್ಟು ತಾಯಿ ಮತ್ತು ಅಜ್ಜಿ ಮಾಡುವ ಊಟಕ್ಕೆ ಬೆರೆಸುವಂತೆ ಒತ್ತಾಯಿದ್ದಾನೆ. ಅದರಂತೆ ತಾಯಿ ಹಾಗೂ ಅಜ್ಜಿ ಊಟ ಮಾಡುವಾಗ ಸಾಂಬರಿಗೆ ನಿದ್ದೆ ಮಾತ್ರೆ ಬೆರೆಸಿದ್ದಾಳೆ..
ಇದೇ ವೇಳೆ ಮನೆಗೆ ಬಂದವ ಬಾಗಿಲು ತೆರೆಯುವಂತೆ ಬೆದರಿಸಿ , ನಂತರ ಒಳಗ ನುಗ್ಗಿದ್ದಾನೆ..
ನಂತರ ಆಕೆಯನ್ನ ಬಲವಂತವಾಗಿ ರೂಮಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ಆದರೆ ಮಾತ್ರ ಮದುವೆಯಾಗೋದಾಗಿ ಹೆದರಿಸಿದ್ದಾನೆ.. ಈ ಕೃತ್ಯ ನಡೆಯುವ ಸಂದರ್ಭದಲ್ಲಿ ಆಕೆಯ ತಂದೆಯಿರಲಿಲ್ಲ.. ತಂದೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ..
ಈ ಸಂಬಂಧ ಸಂತ್ರಸ್ತೆ ತಂದೆ ನಾಗಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..