Mandya ರಸ್ತೆಗೆ ಗುಂಡಿಗೆ ಮಂಡ್ಯದಲ್ಲಿ ನಿವೃತ್ತ ಯೋಧರೋಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ನಿವೃತ್ತ ಯೋಧ ಎಸ್.ಎನ್ ಕುಮಾರ್ (39) ಮಂಡ್ಯದ ಸಾತನೂರಿನಿಂದ ಮಂಡ್ಯಗೆ ಬರುತ್ತಿದ್ದ ವೇಳೆ ಕಾರೆಮನೆ ಗೇಟ್ ಬಳಿ ಇದ್ದ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮುಂದೆ ಬಂದ ಬೈಕ್ ಗೆ ಡಿಕ್ಕಿ ಹೊಡೆ ದಿದ್ದಾರೆ .
ಈ ವೇಳ ಕೆಳಗೆ ಬಿದ್ದ ಕುಮಾರ್ ಅವರಿಗೆ ಹಿಂದೆ ಯಿಂದ ಬಂದ ಲಾರಿ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವವನ್ನಪ್ಪಿದ್ದಾರೆ.
ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಕುಮಾರ್ ಈ ಘಟನೆ ನಡೆದಿದೆ . ಗುಂಡಿಯನ್ನು ತಪ್ಪಿಸಲು ಹೋಗಿ ಎದುರಿನಿಂದ ಬಂದ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ನಿವೃತ್ತಿ ಬಳಿಕ ಪೊಲೀಸ್ ಪೇದೆಯಾಗಿ ತರಬೇತಿಗೆ ಹೋಗುತ್ತಿದ್ದರು. ನಿನ್ನೆ ಸ್ವಗ್ರಾಮ ಸಾತನೂರು ಗ್ರಾಮಕ್ಕೆ ಕುಮಾರ್ ಬಂದಿದ್ದ ವೇಳೆ ಈ ಘಟನೆ ನಡೆದಿದೆ , ಮಂಡ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








