Mandya | ಹಾಡುಹಗಲೇ ಕುಖ್ಯಾತ ರೌಡಿ ಬರ್ಬರ ಹತ್ಯೆ
ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಹಾಡುಹಗಲೇ ಕುಖ್ಯಾತ ರೌಡಿಯ ಬರ್ಬಲ ಕೊಲೆಯಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಈಶ್ವರನ ದೇವಸ್ಥಾನದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
38 ವರ್ಷದ ಅರುಣ್ ಅಲಿಯಾಸ್ ಅಲ್ಲು ಕೊಲೆಯಾದ ರೌಡಿಯಾಗಿದ್ದಾನೆ.
ರೌಡಿ ಅರುಣ್ ಗಡಿಪಾರಾಗಿದ್ರೂ ಕೆ.ಆರ್.ಪೇಟೆಗೆ ಬಂದಿದ್ದ.
ಇದರ ಮಾಹಿತಿ ತಿಳಿದು ಸ್ಕೆಚ್ ಹಾಕಿ ದೇಗುಲದಲ್ಲಿದ್ದಾಗ ಕೊಲೆ ಮಾಡಲಾಗಿದೆ.

ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಪ್ರಕರಣದಲ್ಲಿ ಅರುಣ್ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ರೌಡಿ ಅರುಣ್ ಕೊಲ್ಲೋದಕ್ಕೆ ಹಲವು ವರ್ಷಗಳಿಂದಲೂ ಸ್ಕೆಚ್ ಹಾಕಲಾಗಿತ್ತು.
ಹಳೆಯ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








