ಮಂಡ್ಯದ 1 ರಿಂದ 7 ನೇ ತರಗತಿ ಶಾಲೆಗಳು ಬಂದ್

1 min read
Mandya Saaksha tv

ಮಂಡ್ಯದ 1 ರಿಂದ 7 ನೇ ತರಗತಿ ಶಾಲೆಗಳು ಬಂದ್ Saaksha Tv

ಮಂಡ್ಯ: ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೇ 1 ರಿಂದ 7ನೇ ತರಗತಿಯ ಶಾಲೆಗಳಿಗೆ  ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಶ್ವಥಿ ಆದೇಶ  ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾದರೆ ಶಾಲೆಗಳಿಗೆ ರಜೆ ಘೋಷಣೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಸರಕಾರ ನೀಡಿತ್ತು.

Corona shock to police in Mandya saaksha tv

ಶಾಲೆಗಳಲ್ಲಿ ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನಲೇ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನರಹಿತ ಹಾಗೂ ವಸತಿ ಶಾಲೆಗಳನ್ನು ಒಳಗೊಂಡಂತೆ ಎಲ್ ಕೆಜಿ, ಯುಕೆಜಿ, ಅಂಗವಾಡಿ ಕೇಂದ್ರಗಳು ಸೇರಿದಂತೆ 1 ರಿಂದ 7ನೇ ತರಗತಿಯವರೆಗಿನ ಶಾಲೆಗಳನ್ನು ಜನವರಿ 17 ರಿಂದ 22ರವರೆಗೆ ರಜೆ ಘೋಷಿಸಲಾಗಿದೆ.

ಅಲ್ಲದೇ ಈ ಶಾಲೆಗಳಲ್ಲಿನ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗದಂತೆ ಆನ್ ಲೈನ್, ಇತರೆ ಮಾರ್ಗಗಳ ಮೂಲಕ ಕಲಿಕೆ, ಬೋಧನೆ ಮುಂದುವರೆಸುವಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd