ಮಂಗಳೂರು ಏರ್‌ಪೋರ್ಟ್ ಇನ್ನು ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ Mangalore Adani Airport
ಮಂಗಳೂರು, ನವೆಂಬರ್02: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರವಾಗಿದೆ. ಕೇಂದ್ರ ಸರಕಾರದ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡುವ ಯೋಜನೆಯನ್ವಯ ಶುಕ್ರವಾರ ತಡ ರಾತ್ರಿ 12 ಗಂಟೆಗೆ ವಿಮಾನ ನಿಲ್ದಾಣ ಹಸ್ತಾಂತರಗೊಂಡಿದೆ.
Mangalore Adani Airport
ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣವು ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಎಂಬುದಾಗಿ ಕರೆಯಲ್ಪಡುತ್ತದೆ.
ವಿಮಾನಗಳ ಹಾರಾಟ ಹೊರತುಪಡಿಸಿ ಉಳಿದೆಲ್ಲಾ ರೀತಿಯ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಅದಾನಿ ಸಮೂಹ ಸಂಸ್ಥೆ ಇನ್ನು ಮುಂದೆ ನಿರ್ವಹಿಸಲಿದೆ.
ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಅವರು ವಿಮಾನ ನಿಲ್ದಾಣ ಹಸ್ತಾಂತರಕ್ಕೆ ಸಂಬಂಧಿಸಿದ ಒಡಂಬಡಿಕೆ ಪತ್ರವನ್ನು ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿ. ನ ಸಿಇಒ ಅಶುತೋಷ್ ಚಂದ್ರ ಮತ್ತು ಅದಾನಿ ಏರ್‌ಪೋರ್ಟ್‌ಗಳ ಸಿಇಒ ಬೆಹಾಡ್ ಝಂಡಿ ಅವರಿಗೆ ಹಸ್ತಾಂತರಿಸಿದರು.
ಉತ್ತರ ಪ್ರದೇಶ – ಇಲ್ಲಿ ಹುಡುಗರು ಸಹ ಸಾರ್ವಜನಿಕವಾಗಿ ಹಾಫ್ ಪ್ಯಾಂಟ್ ಧರಿಸುವಂತಿಲ್ಲ
ಈ ವೇಳೆ, ಪ್ರಮುಖರಾದ ಆರ್. ಮಾಧವನ್ ಹಾಗೂ ಬಿ.ಕೆ. ಮಲ್ಹೋತ್ರ ಉಪಸ್ಥಿತರಿದ್ದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು 50 ವರ್ಷಗಳ ಲೀಸ್‌ಗೆ ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಒಂದು ವರ್ಷದ ಅವಧಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆಗಳು ಸಮಾನಾಂತರವಾಗಿ ಕಾರ್ಯ ನಿರ್ವಹಿಸಲಿವೆ.
ಹಸ್ತಾಂತರಗೊಳ್ಳುತ್ತಿದ್ದಂತೆ ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಎಂದು ಹೆಸರು ಬದಲಾಗಿರುವ ವಿಮಾನ ನಿಲ್ದಾಣದ ಒಳಗೆ ಹಾಗೂ ಹೊರಗಡೆ ಅದಾನಿ ಏರ್‌ಪೋರ್ಟ್ ನಾಮ ಫಲಕ ಹಾಕಲಾಗಿದೆ. ವಿಮಾನ ನಿಲ್ದಾಣದ ಆಗಮನ ಮತ್ತು ನಿರ್ಗಮನ ರಸ್ತೆಯ ದ್ವಾರ ಇರುವ ಕೆಂಜಾರು ಬಜಪೆ ಹೆದ್ದಾರಿಯಲ್ಲಿಯೂ ಅದಾನಿ ಏರ್‌ಪೋರ್ಟ್ ನಾಮಫಲಕ ಅಳವಡಿಸಲಾಗಿದೆ.
ಅದಾನಿ ಸಂಸ್ಥೆಯ ಪ್ರಮುಖರು ಹಸ್ತಾಂತರದ ಬಳಿಕ ದುಬೈ ನಿಂದ ಅದಾನಿ ಏರ್‌ಪೋರ್ಟ್ ಗೆ ಶನಿವಾರ ಮುಂಜಾನೆ 1.45 ಕ್ಕೆ ಆಗಮಿಸಿದ ವಿಮಾನದ ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮವನ್ನು ಆಚರಿಸಿಕೊಂಡರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv