Mangaluru : ಊಟದ ತಟ್ಟೆತೊಳೆಯುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ…
ಊಟದ ತಟ್ಟೆತೊಳೆಯುವ ವಿಚಾರಕ್ಕೆ ನಡೆದ ಇಬ್ಬರು ಸ್ನೇಹಿತರ ನಡುವಿನ ಜಗಳ ಒಬ್ಬನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮಂಗಳೂರಿನ ಮರವೂರಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಸಂಜಯ್ ಎಂದು ಗುರುತಿಸಲಾಗಿದೆ. ಸುಹಾನ್ ಈತನನ್ನು ಕೊಲೆ ಮಾಡಿದ ಸ್ನೇಹಿತ.
ಮರವೂರಿ ಕೊಸ್ಟಲ್‌ಗಾರ್ಡ್ ಸೈಟ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ಸ್ನೇಹಿತರಾದ ರಾಜನ್, ಸಂಜಯ್ ಮತ್ತು ಸುಹಾನ್ ಇದೇ ಸೈಟ್ ನ್ ಶೆಡ್ ಗಳಲ್ಲಿ ವಾಸಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಊಟದ ತಟ್ಟೆತೊಳೆಯುವ ವಿಚಾರದಲ್ಲಿ ಸ್ನೇಹಿತರಾದ ಸಂಜಯ್ ಮತ್ತು ಸುಹಾನ್ ಯಾದವ್ ಗಲಾಟೆ ಪ್ರಾರಂಭಿಸಿದ್ದರು. ನಂತರ ಸುಹಾನ್, ಸಂಜಯ್‌ನನ್ನು ಉದ್ದೇಶಿಸಿ, ನಾನು ನಿನ್ನ ಮನೆಯ ಕೆಲಸದವನಲ್ಲ, ನನಗೆ ತಟ್ಟೆತೊಳೆಯಲು ಹೇಳುತ್ತಿಯಾ ಎಂದು ಕೆಟ್ಟದಾಗಿ ಬೈಯುತ್ತಾ ಕೈಯಿಂದ ಹಲ್ಲೆ ಮಾಡಿದ್ದನು. ಆಗ ರೂಮಿನಲ್ಲಿದ್ದ ಇತರೆ ಸ್ನೇಹಿತರು ಗಲಾಟೆಯನ್ನು ಬಿಡಿಸಿದ್ದಾರೆ.
ಆ ನಂತರ ತಟ್ಟೆಗಳಿಗೆ ಅನ್ನ ಬಡಿಸುತ್ತಿದ್ದಾಗ ಸುಹಾನ್ ಏಕಾಏಕಿ ಸಂಜಯ್ ಬಳಿ ಹೋಗಿ ನಿನ್ನನ್ನು ಸಾಯಿಸುತ್ತೇನೆ ಎಂದು ಬಲವಾಗಿ ಹಿಂದಕ್ಕೆ ದೂಡಿದ್ದಾನೆ. ಪರಿಣಾಮ ಸಂಜಯ್ ಹಿಮ್ಮುಖವಾಗಿ ಕೆಳಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ.
Mangaluru: A fight over washing dinner plates ended in murder.