Mangaluru Blast: ಮಂಗಳೂರು ಧಾರ್ಮಿಕ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿದ್ನ ಉಗ್ರ ಶಾರಿಕ್…
ಮಂಗಳೂರಿನ ಆಟೋರಿಕ್ಷಾ ಸ್ಪೋಟ ಪ್ರಕರಣದ ಹೊಣೆಯನ್ನ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದ್ದು ಮಂಗಳೂರು ಧಾರ್ಮಿಕ ಕೇಂದ್ರಗಳೇ ಟಾರ್ಗೆಟ್ ಹಾಗಿದ್ದವ ಎಂಬ ಅನುಮಾನ ಕಾಡುತ್ತಿದೆ. ಇದೇ ಕಾರಣಕ್ಕೆ ಉಗ್ರ ಶಾರಿಕ್ ಮೊಹ್ಮದ್ ಹಿಂದೂಗಳ ಆಧಾರ್ ಕಾರ್ಡ್ ಮಾಡಿಸಿದ್ದಾ ಎಂಬು ಅನುಮಾನ ಹುಟ್ಟಿಕೊಂಡಿದೆ.
ಪೊಲೀಸರು ಶಾರಿಕ್ ಮೊಬೈಲ್ ವಶಪಡಿಸಿಕೊಂಡು ಮೊಬೈಲ್ನಲ್ಲಿರುವ ಗೂಗಲ್ ಸರ್ಚಿಂಗ್ ಪರಿಶೀಲನೆ ಮಾಡಿದ್ದಾರೆ. ಸ್ಫೋಟ ಸ್ಥಳದಲ್ಲಿ ಸಿಕ್ಕ ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ಸ್ಫೋಟಕ ಮಾಹಿತಿ ಹೊರಬಂದಿದ್ದು, ಶಾರಿಕ್ ಗೂಗಲ್ನಲ್ಲಿ ಮಣ್ಣಗುಡ್ಡದ ಲೊಕೇಷನ್ ಸರ್ಚ್ ಮಾಡಿದ್ದಾನೆ.
ಇದಲ್ಲದೇ ಶಂಕಿತ ಉಗ್ರ ಬೆಂಗಳೂರಿಗೂ ಬಂದು ಹೋಗಿದ್ದಾ ಎನ್ನವ ಮಾಹಿತಿ ತಿಳಿದು ಬಂದಿದೆ. ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಸಂಬಂಧಿಕರ ಸೈಮ್ ಹನಿ ಅಪಾರ್ಟ್ ಮೆಂಟ್ನಲ್ಲಿ ವಾಸವಿದ್ದನು. ದಾಸರಹಳ್ಳಿಯ SLS ಸೈಮ್ ಹನಿ ಅಪಾರ್ಟ್ಮೆಂಟ್,1ನೇ ಅಡ್ಡರಸ್ತೆ, ಸೊಣ್ಣಪ್ಪ ಬಡಾವಣೆಯಾಗಿದೆ.
Mangaluru Blast: Terrorist Shariq targeted religious areas in Mangaluru…??