Mangaluru | ಪೊಲೀಸರ ಮೇಲೆ ಹಲ್ಲೆ | ಮೂವರ ಬಂಧನ

1 min read

Mangaluru | ಪೊಲೀಸರ ಮೇಲೆ ಹಲ್ಲೆ | ಮೂವರ ಬಂಧನ

ಮಂಗಳೂರು : ತಡರಾತ್ರಿ ಕುಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಮಂಗಳೂರಿನ ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಉರ್ವ ಠಾಣಾ ಪೊಲೀಸರು ನೈಟ್ ರೌಂಡ್ ಮಾಡುತ್ತಿದ್ದರು.

ಈ  ವೇಳೆ ಚಿಲಿಂಬಿ ಗುಡ್ಡದಲ್ಲಿ ಯುವಕರ ತಂಡವೊಂದು ಸಾರ್ವಜನಿಕ ಸ್ಥಳದಲ್ಲೇ ಮದ್ಯ ಸೇವನೆ ಮಾಡುತ್ತಿತ್ತು.

Mangaluru three-held-for-attacking-police  saaksha tv
Mangaluru three-held-for-attacking-police saaksha tv

ಈ ಬಗ್ಗೆ ವಿಚಾರಣೆ ನಡೆಸುವಾಗ ಕುಡಿದ ಅಮಲಿನಲ್ಲಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.

ಅಲ್ಲದೇ ಮದ್ಯದ ಮತ್ತಿನಲ್ಲಿ ಮೂವರು ಯುವಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿಯ ಕೈ ಮತ್ತು ಕಾಲಿಗೆ ಗಾಯಗಳಾಗಿವೆ.

ಇನ್ನು ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd