Manglore Bomb Blast : ಅಲ್-ಹಯಾತ್ ನ ಸದಸ್ಯರಿಗೆ ಬಾಂಬ್ ತಯಾರಿಕೆ ಸಂಬಂಧಿತ ವಿಡಿಯೋ ಹಂಚಿಕೊಂಡಿದ್ದ…
ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.. ಮಂಗಳೂರೊನ ಪ್ರಕರಣದಲ್ಲಿ ಬೆಂಗಳೂರರಿಗೂ ಲಿಂಕ್ ಇರುವುದು ಗೊತ್ತಾಗಿದೆ..
ಬೆಂಗಳೂರು ಮೂಲಕ ರಹುಲ್ಲಾನನ್ನ ಬಂಧಿಸಲಾಗಿದೆ.. ಅಲ್ಲದೇ ಇವರ ಉದ್ದೇಶ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡುವುದು ಎಂಬ ಆಘಾತಕಾರಿ ವಿಚಾರವೂ ಗೊತ್ತಾಗಿದೆ..
ಬಂಧಿತ ಆರೋಪಿ ಮೈಸೂರಿನಲ್ಲಿ ವಾಸಿಸುತ್ತಿದ್ದ. ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ ನಲ್ಲಿ ನಡೆಸಿದ ತನಿಖೆಯ ಪ್ರಕಾರ, ಟೆಲಿಗ್ರಾಮ್ ನಲ್ಲಿರುವ ಐಸಿಸ್ ನ ಅಧಿಕೃತ ಮಾಧ್ಯಮ ಕೇಂದ್ರ ಅಲ್-ಹಯಾತ್ ನ ಸದಸ್ಯರಾಗಿದ್ದ ತನ್ನ ಇಬ್ಬರು ಸಹಚರರಿಗೆ ಬಾಂಬ್ ತಯಾರಿಕೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ದಾಖಲೆಗಳನ್ನು ಶಾರಿಕ್ ಕಳುಹಿಸುತ್ತಿದ್ದ ಎಂಬ ಸತ್ಯ ಬಹಿರಂಗವಾಗಿದೆ.
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿ ಇರಿದ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಪ್ರಮುಖ ಆರೋಪಿ ಜಬೀವುಲ್ಲಾ ಸೇರಿದಂತೆ ನಾಲ್ವರನ್ನು ಬಂಧಿಸಿ ಯುಎಪಿಎ ಹಾಕಿದ್ದರು.
ತನಿಖೆಯ ಸಂದರ್ಭದಲ್ಲಿ, ಶಾರಿಕ್ ಗೆ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ಎಂಬ ಇಬ್ಬರು ಸಹಚರರು ಇದ್ದಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಶಾರಿಕ್ ಮತ್ತು ಮಾಜ್ 2020 ರ ಮಂಗಳೂರಿನ ಗೋಡೆ ಮೇಲೆ ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಬಾಂಬ್ ಗಳನ್ನು ತಯಾರಿಸುವ ಪರಿಕಲ್ಪನೆಯ ಬಗ್ಗೆ ಶಾರಿಕ್ ಹಂಚಿಕೊಂಡ ಪಿಡಿಎಫ್ ಫೈಲ್‌ಗಳು ಮತ್ತು ವೀಡಿಯೊಗಳಲ್ಲಿ ತಿಳಿದುಕೊಂಡ ನಂತರ ಇಬ್ಬರು ಆರೋಪಿಗಳು ಇ-ಕಾಮರ್ಸ್ ಸೈಟ್ ಮತ್ತು ಬ್ಯಾಟರಿಗಳು, ಸ್ವಿಚ್‌ಗಳು, ವೈರ್‌ಗಳು, ಮ್ಯಾಚ್‌ಬಾಕ್ಸ್‌ಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಬಾಂಬ್ ತಯಾರಿಸಲು ಬೇಕಾದ ಟೈಮರ್ ರಿಲೇ ಸರ್ಕ್ಯೂಟ್‌ಗಳನ್ನು ವಮೊಗ್ಗದಲ್ಲಿ ಖರೀದಿಸಿದ್ದರು.
ಶಿವಮೊಗ್ಗದ ತುಂಗಾ ನದಿ ದಡದಲ್ಲಿರುವ ಕೆಮ್ಮನಗುಂಡಿ ಎಂಬ ಸ್ಥಳದಲ್ಲಿ ಆರೋಪಿಗಳು ತಯಾರಿಸಿದ್ದ ಬಾಂಬ್ ಅನ್ನು ಪ್ರಾಯೋಗಿಕವಾಗಿ ಸ್ಫೋಟಿಸಿದ್ದು, ಅದು ಯಶಸ್ವಿಯಾಗಿದೆ. ಅವರು ಸ್ಫೋಟಕಗಳನ್ನು ಕೂಡ ಸಂಗ್ರಹಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.