Manglore Bomb Blast : NIA ತನಿಖೆ ಬಗ್ಗೆ ನಿರ್ಧರಿಸಿಲ್ಲ – ಸಿಎಂ ಬೊಮ್ಮಾಯಿ
ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.. ಮಂಗಳೂರೊನ ಪ್ರಕರಣದಲ್ಲಿ ಬೆಂಗಳೂರರಿಗೂ ಲಿಂಕ್ ಇರುವುದು ಗೊತ್ತಾಗಿದೆ..
ಬೆಂಗಳೂರು ಮೂಲಕ ರಹುಲ್ಲಾನನ್ನ ಬಂಧಿಸಲಾಗಿದೆ.. ಅಲ್ಲದೇ ಇವರ ಉದ್ದೇಶ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡುವುದು ಎಂಬ ಆಘಾತಕಾರಿ ವಿಚಾರವೂ ಗೊತ್ತಾಗಿದೆ..
ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡಿರುವ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಗಂಟಲಿನಲ್ಲಿ ಪೈಪ್ ಇದೆ ಮತ್ತು ಅವನಿಗೆ ಮಾತನಾಡಲು ಸಾಧ್ಯವಿಲ್ಲ. ಕುಟುಂಬ ಸದಸ್ಯರು ಆತನ ಗುರುತನ್ನು ಖಚಿತಪಡಿಸಿದ್ದಾರೆ. ನಾವು ಎನ್ ಐಎಗೆ ವಿವರಗಳನ್ನು ನೀಡಿದ್ದೇವೆ. ಆದರೆ, ಪ್ರಕರಣವನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.
ಇತರೇ ಅಪ್ ಡೇಟ್ ಗಳು..
ಬಂಧಿತ ಆರೋಪಿ ಮೈಸೂರಿನಲ್ಲಿ ವಾಸಿಸುತ್ತಿದ್ದ. ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ ನಲ್ಲಿ ನಡೆಸಿದ ತನಿಖೆಯ ಪ್ರಕಾರ, ಟೆಲಿಗ್ರಾಮ್ ನಲ್ಲಿರುವ ಐಸಿಸ್ ನ ಅಧಿಕೃತ ಮಾಧ್ಯಮ ಕೇಂದ್ರ ಅಲ್-ಹಯಾತ್ ನ ಸದಸ್ಯರಾಗಿದ್ದ ತನ್ನ ಇಬ್ಬರು ಸಹಚರರಿಗೆ ಬಾಂಬ್ ತಯಾರಿಕೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ದಾಖಲೆಗಳನ್ನು ಶಾರಿಕ್ ಕಳುಹಿಸುತ್ತಿದ್ದ ಎಂಬ ಸತ್ಯ ಬಹಿರಂಗವಾಗಿದೆ.
ಬಾಂಬ್ ಗಳನ್ನು ತಯಾರಿಸುವ ಪರಿಕಲ್ಪನೆಯ ಬಗ್ಗೆ ಶಾರಿಕ್ ಹಂಚಿಕೊಂಡ ಪಿಡಿಎಫ್ ಫೈಲ್ಗಳು ಮತ್ತು ವೀಡಿಯೊಗಳಲ್ಲಿ ತಿಳಿದುಕೊಂಡ ನಂತರ ಇಬ್ಬರು ಆರೋಪಿಗಳು ಇ-ಕಾಮರ್ಸ್ ಸೈಟ್ ಮತ್ತು ಬ್ಯಾಟರಿಗಳು, ಸ್ವಿಚ್ಗಳು, ವೈರ್ಗಳು, ಮ್ಯಾಚ್ಬಾಕ್ಸ್ಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಬಾಂಬ್ ತಯಾರಿಸಲು ಬೇಕಾದ ಟೈಮರ್ ರಿಲೇ ಸರ್ಕ್ಯೂಟ್ಗಳನ್ನು ವಮೊಗ್ಗದಲ್ಲಿ ಖರೀದಿಸಿದ್ದರು.
ಶಿವಮೊಗ್ಗದ ತುಂಗಾ ನದಿ ದಡದಲ್ಲಿರುವ ಕೆಮ್ಮನಗುಂಡಿ ಎಂಬ ಸ್ಥಳದಲ್ಲಿ ಆರೋಪಿಗಳು ತಯಾರಿಸಿದ್ದ ಬಾಂಬ್ ಅನ್ನು ಪ್ರಾಯೋಗಿಕವಾಗಿ ಸ್ಫೋಟಿಸಿದ್ದು, ಅದು ಯಶಸ್ವಿಯಾಗಿದೆ. ಅವರು ಸ್ಫೋಟಕಗಳನ್ನು ಕೂಡ ಸಂಗ್ರಹಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.