Manglore : ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದವನಿಗೆ ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿತ
ಮಂಗಳೂರು : ಅಪ್ರಾಪ್ತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
ಡಿಸೆಂಬರ್ 13 ರಂದು ಕರೆಕಾಡು ಎಂಬಲ್ಲಿ ಘಟನೆ ನಡೆದಿದೆ.. ಈ ಯುವಕ ಬೈಕ್ ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ..
ಬಾಲಕಿಯಿಂದ ಮಾಹಿತಿ ಪಡೆದು ಪೋಷಕರು ಹಿಂಬಾಲಿಸಿದ್ದಾರೆ.. ಕರೆಕಾಡು ಪ್ರದೇಶದಲ್ಲಿ ಮತ್ತೆ ಬಾಲಕಿಗೆ ಕಿರುಕುಳ ನೀಡಿದ್ದಾನೆ.. ಈ ವೇಳೆ ಪೋಷಕರು ಹಾಗೂ ಜೊತೆಗಿದ್ದವರು ಗೂಸ ಕೊಟ್ಟಿದ್ದಾರೆ..
ಕಿರುಕುಳ ನೀಡುತ್ತಿದ್ದ ಯುವಕನ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಬಳಿಕ ಪೊಲೀಸರಿಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ..
ಆರೋಪಿಯನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ಧಾರೆ.. ಆರೋಪಿಯ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ಮೇಲೂ ದೂರು ದಾಖಲಾಗಿದೆ..
Manglore , young man beaten by mobe