ರಾಜ್ಯದ 7 ಕಡೆ ಸ್ಪೋಟಕಕ್ಕೆ ಸಂಚು – ಉಗ್ರನಿಗೆ ಐಸಿಸ್ ನಂಟು – ADGP ಅಲೋಕ್ ಕುಮಾರ್..
ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನಿಗೆ ಶಂಕಿತ ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಯಮತ್ತೂರು ಬ್ಲಾಸ್ಟ್ಗೂ ಮಂಗಳೂರು ಬ್ಲಾಸ್ಟ್ಗೂ ಲಿಂಕ್ ಇದೆ ಎಂದು ಮಂಗಳೂರಲ್ಲಿ ADGP ಅಲೋಕ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ.
ಈ ಬಗ್ಗೆ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ADGP ಅಲೋಕ್ ಕುಮಾರ್, ದೊಡ್ಡ ಅನಾಹುತ ತಪ್ಪಿದೆ ಅನ್ನೋ ನೆಮ್ಮದಿ ಇದೆ. ಬಾಂಬ್ ಬ್ಲಾಸ್ಟ್ ಆಗಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗ್ತಾ ಇತ್ತು. ಆದರೆ ಆ ವಿಚಾರದಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಲೇ ಬೇಕು ಎಂದು ಸುದ್ದಿಗೋಷ್ಠಿ ವೇಳೆ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಶಾರಿಕ್ ಕೊಯಮತ್ತೂರು, ಕೇರಳಕ್ಕೆ ಹೋಗಿದ್ದ-ಶಾರಿಕ್ಗೆ ಅಂತಾರಾಷ್ಟ್ರೀಯ ಉಗ್ರ ನಂಟಿದೆ. ಶಾರಿಕ್ನಿಂದಲೇ ಕುಕ್ಕರ್ ಬ್ಲಾಸ್ಟ್ ನಡೆದಿದೆ, ನಕಲಿ ಐಡಿ ಕಾರ್ಡ್ಗಳನ್ನ ಶಾರಿಕ್ ಬಳಸಿದ್ದಾನೆ, UAPA ಕಾಯ್ದೆಯ 120B, 307ರ ಅಡಿ ಕೇಸ್ ದಾಖಲಾಗಿದೆ. ರಾಜ್ಯದ 7 ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿದ್ದು, 7 ಸ್ಥಳಗಲ್ಲೂ ಈಗಾಗಲೇ ಪರಿಶೀಲನೆ ಮಾಡಿದ್ದೇವೆ ಎಂದು ಸಂಚಿನ ಬಗ್ಗೆ ಅಲೋಕ್ಕುಮರ್ ಮಾಹಿತಿ ನೀಡಿದ್ದಾರೆ.
Mangluru Blast: Conspiracy for sabotage in 7 parts of the state: ADGP Alok Kumar..!