Mango fruit recipe – ಹಣ್ಣುಗಳ ರಾಜ ಮಾವು ಅಂದರೆ ಯಾರಿಗೆ ತಾನೆ ಇಷ್ಟಾ ಇಲ್ಲಾ ಹೇಳಿ ಈಂತಹ ರಸಪೂರಿತ ಮಾವಿನ ಹಣ್ಣಿನ ಸಿಸನ್ ಈಗ ಆರಂಭವಾಗಿದೆ.
ಈ ಸಿಸನ್ ನಲ್ಲಿ ಮಾವಿನ ಹಣ್ಣನ್ನು ಸವಿಯೋ ಮಜಾನೆ ಬೇರೆ ಆದರೆ ಈ ಹಣ್ಣಿನಿಂದ ಪಾಯಸ ಮಾಡಬಹುದು .
ಹೌದು ನೀವು ಎಂದಾದರು ಈ ಪಾಯಸ ಸವೆಯುವ ಪ್ರಯತ್ನ ಮಾಡಿದ್ದಿರಾ ಮಾಡಿಲ್ಲ ಎಂದಾದರೆ ಇಲ್ಲಿದೆ ನಿಮಗೆ ಉತ್ತಮವಾದ ರೆಸಿಪಿ.
ಮಾವಿನ ಹಣ್ಣಿನ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು
ನಿಮ್ಮ ನೆಚ್ಚಿನ ಮಾವಿನ ಹಣ್ಣು – ೧/೨
ಹಾಲು – ಎರಡೂವರೆ ಕಪ್ಪ್
ಸಕ್ಕರೆ – 3 ಚಮಚ
ಬಾದಾಮಿ – ೫/೬
ಕೇಸರಿ – ೨/೩ ಎಳೆ
ಸಣ್ಣಗೆ ಕತ್ತರಿಸಿದ ಪಿಸ್ತಾ – 1 ಚಮಚ
ಬಾಸ್ಮತಿ ಅಕ್ಕಿ – ೨/೩ ಚಮಚ
ಪಾಯಸ ಮಾಡುವ ವಿಧಾನ:
ಮೊದಲು ಎರಡು ಪ್ರತ್ಯೇಕ ಕಪ್‍ಗಳಲ್ಲಿ ಬಾದಾಮಿ ಮತ್ತು ಅಕ್ಕಿಯನ್ನು ಹಾಕಿ ಸ್ವಲ್ಪ ನೀರು ಹಾಕಿ ನೆನೆಸಿಡಿ
ಈಗ ಒಂದು ಕಪ್ ನಲ್ಲಿ 4 ಚಮಚದಷ್ಟು ಬೆಚ್ಚಗಿನ ಹಾಲಿಗೆ ೨/೩ ಕೇಸರಿ ಎಳೆಗಳನ್ನು ಸೆರಿಸಿ.
ನೆನೆಸಿದ ಬಾದಾಮಿ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಿ.
ಈಗ ಮಿಕ್ಸಿ ಜಾರಿಗೆ ಅಕ್ಕಿ, ನೆನೆಸಿದ ಬಾದಾಮಿ ಹಾಗೂ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ
ನಂತರ ಹಾಲನ್ನು ಕೆನೆ ಬರುವವರೆಗೆ ಕುದಿಸಿ ಅದಕ್ಕೆ ರುಬ್ಬಿಕೊಂಡ ಅಕ್ಕಿ ಮತ್ತು ಬಾದಾಮಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ ಕುದಿಸಿ ಹಾಲು ಗಟ್ಟಿಯಾಗುವ ಹಂತಕ್ಕೆ ಬಂದಾಗ ಸಕ್ಕರೆ ಹಾಕಿ ಅದಕ್ಕೇ ಕೆಸರಿ ಹಾಕಿರೋ ಹಾಲನ್ನ ಬೆರೆಸಿ ಚೆನ್ನಾಗಿ ಕಲಸಿ
ನಿಮ್ಮಿಷ್ಟದ ಮಾವಿನ ಹಣ್ಣನ್ನು ತೆಗೆದುಕೊಳ್ಳಿ ಆ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಈಗಾಗಲೆ ತಯಾರು ಮಾಡಿ ಕುದಿಯಲು ಇಟ್ಟಿರುವ ಪಾಯಸಕ್ಕೆ ತಯಾರಿಸಿದ ಮಾವಿನ ಹಣ್ಣಿನ ಪೇಸ್ಟ್ ಹಾಕಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಕಲಸಿ .
ಇದಿಗ ನಿಮ್ಮಿಷ್ಟದ ಮಾವಿನ ಹಣ್ಣಿನ ಪಾಯಸ ತಯಾರಾಗಿದೆ ಇದರ ಮೇಲೆ ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ ಹಾಕಿ ಮಾವಿನ ಹಣ್ಣಿನ ಪಾಯಸ ಸವೆಯಿರಿ.