Manipal | ಕುಡಿದ ಮತ್ತಿನಲ್ಲಿ ಕಾರು ಚಾಲನೆ : ಎರಡು ಕಾರು ಜಖಂ
ಉಡುಪಿ : ಚಾಲಕನೋರ್ವ ಕುಡಿದ ಮತ್ತಿನಲ್ಲಿ ಕಾರನ್ನ ಹಿಮ್ಮುಖವಾಗಿ ಚಲಾಯಿಸಿ ನಾನಾ ಅವಾಂತರಗಳನ್ನು ಸೃಷ್ಟಿಸಿರುವ ಘಟನೆ ಮಣಿಪಾಲ್ ನಲ್ಲಿ ನಡೆದಿದೆ.
ಸೆಪ್ಟೆಂಬರ್ 3 ರಂದು ಸುಹಾಸ್ ಎಂಬುವವರು ತಮ್ಮ ಸ್ನೇಹಿತರೊಂದಿಗೆ ಮಣಿಪಾಲದ ಪಬ್ ಗೆ ಬಂದಿದ್ದು, ಕಂಠಪೂರ್ತಿ ಕುಡಿದಿದ್ದಾರೆ.
ಬಳಿಕ ಪಬ್ ನಿಂದ ಹೊರಗೆ ಹೋಗುವಾಗ ತನ್ನ ಇನ್ನೋವಾ ಕಾರನ್ನು ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾರೆ.

ಪರಿಣಾಮ ಪಬ್ ನೌಕರ ವಿಕ್ರಾಂತ್ ಅವರ ಕಾಲಿಗೆ ಗಾಯವಾಗಿದೆ. ಅಲ್ಲದೇ ಪಾರ್ಕಿಂಗ್ ನಲ್ಲಿದ್ದ ಸ್ಕೋಡಾ ಮತ್ತು ಫಾರ್ಚೂನರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಈ ಸಂಬಂಧ ಫಾರ್ಚೂನರ್ ಕಾರು ಚಾಲಕ ರೋಷನ್ ಅವರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕ ಸುಹಾನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.