ಬರ್ತ್ ಡೇ ಸಂಭ್ರಮದಲ್ಲಿ ಮನೀಷ್ ಪಾಂಡೆ..!
ಬೆಂಗಳೂರು : ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಹಾಗೂ ಅದ್ಭುತ ಕ್ಷೇತ್ರ ರಕ್ಷಕ ಕನ್ನಡಿಗ ಮನೀಶ್ ಪಾಂಡೆ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.
ಮನೀಶ್ ಪಾಂಡೆ ಇಂದು 32ನೇ ವಸಂತಕ್ಕೆ ಕಾಲಿಟ್ಟು, ಸ್ನೇಹಿತರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಕೋರುತ್ತಿದ್ದಾರೆ.
ಅಂದಹಾಗೆ ಮನೀಶ್ ಪಾಂಡೆ ಜನಸಿದ್ದು, ಉತ್ತರಾಖಂಡದ ನೈನಿತಾಲ್ ನಲ್ಲಿ. ಆದ್ರೆ ಅವರ ತಂಡ ಸೇನಾ ಅಧಿಕಾರಿಯಾದ ಕಾರಣ ಅವರು ಬೆಂಗಳೂರಿಗೆ ವರ್ಗಾವಣೆಯಾದರು.
ಬಳಿಕ ಮನೀಶ್ ಬೆಂಗಳೂರಲ್ಲೇ ಉಳಿದು ಕರ್ನಾಟಕ ರಣಜಿ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಮೈಸೂರಿನಲ್ಲಿ ಬಹುಪಾಲು ಕ್ರಿಕೆಟ್ ಆಡಿರುವ ಮನೀಶ್, ಅಲ್ಲಿಂದಲೇ ಅಂಡರ್ 19 ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ವಿರಾಟ್ ನೇತೃತ್ವದ ತಂಡ ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ಮನೀಶ್ ಪ್ರಮುಖ ಪಾತ್ರವಹಿಸಿದ್ದರು.
ಈ ಬಳಿಕ ಮನೀಶ್ ಆರ್ ಸಿಬಿ ತಂಡ ಸೇರಿಕೊಂಡರು. ಐಪಿಎಲ್ ನ ಎರಡನೇ ಆವೃತ್ತಿನಲ್ಲಿ ಸೆಂಚೂರಿ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್ ನ ಗಮನ ಸೆಳೆದರು.
ನಂತರ ಪಾಂಡೆ 2015ರಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ಹಲವು ಬಾರಿ ಅವಕಾಶ ಸಿಕ್ಕರೂ ಅವರು ಬೆಂಚ್ ಕಾಯ್ದಿರುವುದೇ ಜಾಸ್ತಿಯಾಗಿದೆ. ಆಡುವ 11ರ ಬಳಗದಲ್ಲಿ ಪಾಂಡೆಗೆ ಅವಕಾಶ ಸಿಕ್ಕಿರುವುದು ತೀರಾ ಅಪರೂಪವಾಗಿದೆ.