ನಿರ್ಭಯ ಸಮಗ್ರತೆಗೆ ಮನಮೋಹನ್ ಸಿಂಗ್ ಶ್ರಮಿಸಿದ್ದರು : ಒಬಾಮಾ
ನವದೆಹಲಿ : ನಿರ್ಭಯ ಸಮಗ್ರತೆಗೆ ಭಾರತದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ನಂತಹ ಒಂದಿಬ್ಬರು ನಾಯಕರಷ್ಟೆ ಶ್ರಮಿಸಿದ್ದರು ಎಂದು ಬರಾಕ್ ಒಬಾಮಾ ಹೇಳಿದ್ದಾರೆ.
ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಪುಸ್ತಕ ಬರೆದಿದ್ದು, ಇದರಲ್ಲಿ ವಿಶ್ವದ ಹಲವು ರಾಜಕೀಯ ನಾಯಕರ ಬಗ್ಗೆ ಮತ್ತು ಹಲವು ವಿಷಯಗಳನ್ನು ದಾಖಲಿಸಿದ್ದಾರೆ.
ನಿರ್ಭಯ ಸಮಗ್ರತೆಗೆ ಭಾರತದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ನಂತಹ ಒಂದಿಬ್ಬರು ನಾಯಕರಷ್ಟೆ ಶ್ರಮಿಸಿದ್ದರು ಎಂದು ಬರಾಕ್ ಒಬಾಮಾ ಹೇಳಿದ್ದಾರೆ ಎಂದು ಅಮೆರಿಕದ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ರಾಹುಲ್, ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ : ಒಬಾಮಾ
ಇನ್ನ ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ.

ಒಬಾಮಾರ ಪುಸ್ತಕ 768 ಪುಟಗಳಿದ್ದು, ನವೆಂಬರ್ 17ರಂದು ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಬರಾಕ್ ಒಬಾಮಾ, ಅವರ ಬಾಲ್ಯಜೀವನ, ರಾಜಕೀಯ ಬದುಕು, 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವು ಹೀಗೆ ಅನೇಕ ಸಂಗತಿಗಳನ್ನು ನಮೂದಿಸಿದ್ದಾರೆ.
ಬರಾಕ್ ಒಬಾಮಾ ಅವರು ಅಮೆರಿಕದ ಮೊದಲ ಆಫ್ರಿಕನ್ ಅಮೆರಿಕನ್ ಅಧ್ಯಕ್ಷ. 2008ರಿಂದ 2016ರವರೆಗೆ ಅಮೆರಿಕ ಅಧ್ಯಕ್ಷರಾಗಿದ್ದ ಅವರು 2010 ಮತ್ತು 2015ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel