ಗೋವಾ ಚುನಾವಣೆ –  ಪರಿಕ್ಕರ್ ಪುತ್ರನಿಗೆ ಸಿಗದ ಟಿಕೆಟ್

1 min read

ಗೋವಾ ಚುನಾವಣೆ –  ಪರಿಕ್ಕರ್ ಪುತ್ರನಿಗೆ ಸಿಗದ ಟಿಕೆಟ್

ಗೋವಾ ವಿಧಾನಸಭಾ ಚುನಾವಣೆಗೆ  ಭಾರತೀಯ ಜನತಾ ಪಾರ್ಟಿ  ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಆದರೆ ಪ-ಟ್ಟಿಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಗೆ ಟಿಕೆಟ್ ನಿರಾಕರಣೆ ಮಾಡಿದೆ.  ಇದರ ಬೆನ್ನಲ್ಲೆ ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ಸೇರಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಫೆಬ್ರವರಿ 14 ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದು  40 ಕ್ಷೇತ್ರಗಳ ಪೈಕಿ 34 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡಿದೆ. ಆದರೆ ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುದಾಗಿ ಇಂಗಿತ ವ್ಯಕ್ತಪಡಿಸಿದ್ದ  ಉತ್ಪಲ್ ಪರಿಕ್ಕರ್ ಗೆ  ಟಿಕೆಟ್ ನಿರಾಕರಿಸಿ ಅಲ್ಲಿನ ಹಾಲಿ ಬಿಜೆಪಿ ಶಾಸಕರಿಗೆ ಮತ್ತೆ ಮಣೆ ಹಾಕಿದೆ.

ಇದರ ಬೆನ್ನಲ್ಲೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಪರಿಕ್ಕರ್ ಕುಟುಂಬವನ್ನ ಬಿಜೆಪಿ ಯೂಸ್ ಅಂಡ್ ಥ್ರೋ ರೀತಿ ಬಳಸಿಕೊಳ್ಳುತ್ತಿದೆ. ಇದರಿಮದ ಗೋವಾ ಜನತೆಗೆ ದುಖಃ ವಾಗಿದೆ. ಪರಿಕ್ಕರ್ ಬಗ್ಗೆ ನನಗೆ ಅಪಾರ ಗೌರವವಿದೆ  ಉತ್ಪಲ್ ಪರಿಕ್ಕರ್ ಎಎಪಿ  ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸುವುದಾದರೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd