ಮುಂಬೈ: ಐಸ್ ಕ್ರೀಮ್ ನಲ್ಲಿ (Ice Cream) ಮನುಷ್ಯನ ಕೈ ಬೆರಳು ಪತ್ತೆಯಾಗಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬರು ತನ್ನ ಸಹೋದರಿಗಾಗಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮನುಷ್ಯನ ಕೈಬೆರಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಮುಂಬೈನ ಮಲಾಡ್ನ ಡಾ.ಸೆರಾವೊ ಎಂಬ ವ್ಯಕ್ತಿಯೇ ಆನ್ ಲೈನ್ ಆರ್ಡರ್ ಮಾಡಿದ್ದರು. ಆದರೆ, ಐಸ್ಕ್ರೀಮ್ ಬರುತ್ತಿದ್ದಂತೆ ಓಪನ್ ಮಾಡಿದ್ದಾರೆ. ಈ ವೇಳೆ, ಅವರಿಗೆ ಬೆರಳು ನಟ್ಸ್ ರೀತಿ ಕಾಣಿಸಿಕೊಂಡಿದೆ. ಬಳಿಕ ಅದು ಮನುಷ್ಯನ ಕೈ ಬೆರಳು ಎಂಬುವುದು ಅರಿವಿಗೆ ಬಂದಿದೆ.
ಗಾಬರಿಗೊಂಡ ಅವರು, ಈ ಐಸ್ ಕ್ರೀಮ್ ನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕುರಿತು ಸೆರಾವೊ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಐಸ್ ಕ್ರೀಮ್ನ್ನು ಮತ್ತು ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದು ದೊಡ್ಡ ಅಪರಾಧದ ಶಂಕೆ ಹುಟ್ಟು ಹಾಕಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.