ಅಯೋಧ್ಯಾದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮೂರ್ತಿಯನ್ನು ಪುನಃಸ್ಥಾಪಿಸಲಾಗಿದೆ. ಇದು ಒಂದು ಶತಕೋಟಿ ಜನರ ಕನಸುಗಳನ್ನು ನನಸಾಗಿಸಿದೆ-ಅಮೇರಿಕನ್ ಹಿಂದೂ ವಿದ್ವಾಂಸ ಡಾ. ಡೇವಿಡ್ ಫ್ರೊಲೆ
ಕಾನ್ವರ್ಸ್ ಇಂಡಿಯಾ ವಿಥ್ ರಾಹುಲ್ ಶಿವಶಂಕರ್:
ಇತ್ತೀಚಿಗಷ್ಟೇ ಅಯೋಧ್ಯಾ ದಲ್ಲಿ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣದ ಶಿಲಾನ್ಯಾಸ ನೆರವೇರಿದ್ದು, ಇದು ಸುಮಾರು 500 ವರ್ಷಗಳ ನಂತರ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮೂರ್ತಿಯನ್ನು ಪುನಃಸ್ಥಾಪಿಸಲಾಗಿದೆ. ಇದು ಒಂದು ಶತಕೋಟಿ ಜನರ ಕನಸುಗಳನ್ನು ನನಸಾಗಿಸಿದೆ ಎಂದು . ಕಾನ್ವರ್ಸ್ ಇಂಡಿಯಾ ದಲ್ಲಿ ರಾಹುಲ್ ಶಿವಶಂಕರ್ ಅವರೊಂದಿಗೆ ಸಂವಾದಾತ್ಮಕ ಸಂಭಾಷಣೆಯಲ್ಲಿ ಅಮೇರಿಕನ್ ಹಿಂದೂ ವಿದ್ವಾಂಸ ಡಾ. ಡೇವಿಡ್ ಫ್ರೊಲೆ ಅಭಿಪ್ರಾಯಪಟ್ಟಿದ್ದಾರೆ.
‘ ಆಧುನಿಕ ಭಾರತದ ಪ್ರಮುಖ ಘಟನೆಗಳಲ್ಲಿ ಒಂದಾಗಿದಲ್ಲದೆ ದೇಶದ ಸ್ವಾತಂತ್ರ್ಯದ ನಂತರದ ನಡೆದ ಪ್ರಮುಖ ಐತಿಹಾಸಿಕ ಘಟನೆ ಎಂದು ಬಣ್ಣಿಸಿದ್ದಾರೆ. ಇದು ಭಾರತದಲ್ಲಿ ನಾಗರಿಕತೆಯ ಜಾಗೃತಿ ಮತ್ತು ಅದರ ಪ್ರಾಚೀನ ಸನಾತನ ಧರ್ಮದ ನಾಗರಿಕತೆಯನ್ನು ಗೌರವಿಸುವುದನ್ನು ಸೂಚಿಸುತ್ತದೆ. ಇದರ ಪ್ರಭಾವವನ್ನು ಭಾರತದಲ್ಲಿ ಮಾತ್ರವಲ್ಲದೆ ನೆರೆಯ ನೇಪಾಳ, ಥೈಲ್ಯಾಂಡ್, ಇಂಡೋನೇಷ್ಯಾ ಕೊರಿಯಾದ ಮುಂತಾದ ಏಷ್ಯಾದ ಪ್ರಮುಖ ದೇಶಗಳಿಗೂ ಹಬ್ಬಲಿದೆ ಎಂದು ಅಮೆರಿಕನ್ ಹಿಂದೂ ವಿದ್ವಾಂಸ, ಡೇವಿಡ್ ಫ್ರೊಲೆ ರಾಹುಲ್ ಶಿವಶಂಕರ್ ಅವರಿಗೆ ಕಾನ್ವರ್ಸ್ ಇಂಡಿಯಾ ಕುರಿತು ಹೇಳಿದರು.








