South Cinemas : ‘ಮಾರನ್’ ಫಸ್ಟ್ ಸಿಂಗಲ್ಸ್ ಪ್ರೋಮೋ…!!
ಧನುಷ್ ಅಭಿನಯದ ‘ಮಾರನ್’ ಚಿತ್ರದ ಮೊದಲ ಸಿಂಗಲ್ಸ್ ಇಂದು ಬಿಡುಗಡೆಯಾಗಲಿದ್ದು , ಈ ಹಾಡಿನ ಪ್ರೋಮೋ ರಿಲೀಸ್ ಮಾಡಲಾಗಿದೆ.. ಇದೀಗ ಈ ಪ್ರೋಮೋದಲ್ಲಿ ಎನೆರ್ಜೆಟಿಕ್ ಡ್ಯಾನ್ಸ್ ಮಾಡುತ್ತಾ ಸ್ಟೈಲಿಶ್ ಆಗಿ ಕಾಣಿಸಿಪಕೊಂಡಿರುವ ಧನುಷ್ ಅವರ ಲುಕ್ ಗೆ , ಸ್ಟೆಪ್ಸ್ ಗೆ , ಮ್ಯೂಸಿಕ್ ಗೆ ಥ್ರಿಲ್ ಆಗಿದ್ದು , ಹಾಡಿನ ರಿಲೀಸ್ ಗೆ ಎಕ್ಟೈಟ್ ಆಗಿದ್ದಾರೆ..
ಪೋಲ್ಸ್ 16 ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ಕಾರ್ತಿಕ್ ನರೇನ್, ಧನುಷ್ ಅವರ ಮಾರನ್ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಮಾಳವಿಕಾ ಮೋಹನನ್, ಸಮುದ್ರಕನಿ, ಸ್ಮೃತಿ ವೆಂಕಟ್, ಮಹೇಂದ್ರನ್ ಮತ್ತು ಅಮೀರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಜಿ.ವಿ.ಪ್ರಕಾಶ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾರನ್ ಚಿತ್ರದ ಮೊದಲ ಹಾಡು ‘ಈವಿಲ್ ವರ್ಲ್ಡ್’ ( ಕೆಟ್ಟ ಪ್ರಪಂಚ ) ಜನವರಿ 26 ಅಂದ್ರೆ ಇಂದು ಗಣರಾಜ್ಯೋತ್ಸವದ ಪ್ರಯುಕ್ತ ರಿಲೀಸ್ ಆಗಲಿದೆ.
https://twitter.com/i/status/1486211317782675456
maran films first single promo – today at 7 pm
ಪ್ರೋಮೋಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಗ್ತಿದೆ.
ಧನುಷ್ ಹಾಡಿರುವ ಈ ಹಾಡನ್ನು ಗೀತರಚನೆಕಾರ ವಿವೇಕ್ ಬರೆದಿದ್ದಾರೆ. ಮಾರನ್ ಫಸ್ಟ್ ಸಿಂಗಲ್ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಥಿಯೇಟ್ರಿಕಲ್ ಬಿಡುಗಡೆಯನ್ನು ಹೊರತುಪಡಿಸಿ, ಮಾರನ್ ಚಲನಚಿತ್ರವನ್ನು ಡಿಸ್ನಿ ಹಾಟ್‌ಸ್ಟಾರ್ ಒಟಿಟಿ ಸೈಟ್‌ನಲ್ಲಿ ಲೈವ್ ಆಗಿ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಮಾರನ್ ನಂತರ, ಧನುಷ್ ಪ್ರಸ್ತುತ ದ್ವಿಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.. ಇದಕ್ಕೆ ತಮಿಳಿನಲ್ಲಿ ವಾತಿ , ತೆಲುಗಿನಲ್ಲಿ ಸರ್ ಎಂದು ಟೈಟಲ್ ಇಡಲಾಗಿದೆ.








