ಅಲ್ವಿದಾ ಭಜ್ಜಿ ಭಾಯ್: ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಟರ್ಬನೇಟರ್‌ ಹರ್ಭಜನ್‌ ಸಿಂಗ್:

1 min read

ಅಲ್ವಿದಾ ಭಜ್ಜಿ ಭಾಯ್: ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಟರ್ಬನೇಟರ್‌ ಹರ್ಭಜನ್‌ ಸಿಂಗ್: Marjala Manthana Turbanator Harbhajan saaksha tv

ಮ್ಯಾಚ್‌ ಫಿಕ್ಸಿಂಗ್‌ ಹಗರಣ ಇಡೀ ವಿಶ್ವ ಕ್ರಿಕೆಟ್‌ ಅನ್ನೇ ತಲ್ಲಣಗೊಳಿಸುತ್ತಿದ್ದಾಗ, ಪಾತಾಳದಿಂದ ಟೀಂ ಇಂಡಿಯಾ ಕಟ್ಟಿದ ದಾದಾ ಗರಡಿಯಲ್ಲಿ ಪಳಗಿದ ಅತ್ಯಂತ ನುರಿತ ಪ್ರತಿಭಾವಂತ ಆಫ್‌ ಸ್ಪಿನ್ನರ್‌ ದಿ ಟರ್ಬನೇಟರ್‌ ಖ್ಯಾತಿ ಭಜ್ಜಿ ಯಾನೇ ಹರ್ಭಜನ್‌ ಸಿಂಗ್‌. ಕ್ರಿಕೆಟ್‌ ಮೈದಾನದಲ್ಲಾಗಲೀ ಅಥವಾ ಹೊರಗಾಗಲಿ ತನ್ನ ನೇರ ನಿಷ್ಟುರ ವರ್ತನೆಯಿಂದ ಪ್ರಸಿದ್ಧರಾದವರು ಭಜ್ಜಿ. 41 ವರ್ಷದ ಹರ್ಭಜನ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಇಲ್ಲಿ ಕೆಲವು ಅತ್ಯಂತ ಇಂಟರೆಸ್ಟಿಂಗ್‌ ವಿಚಾರಗಳಿವೆ ಭಜ್ಜಿಯ ಕುರಿತು, ಓದಿ ನೋಡಿ..

ಮೊದಲು ದಾಖಲೆಗಳ ಬಗ್ಗೆ ಹೇಳುವುದಾದರೇ,
ಟೆಸ್ಟ್‌ ಕರಿಯರ್‌: ಆಡಿದ್ದು ಒಟ್ಟು 103 ಟೆಸ್ಟ್‌ ಪಂದ್ಯಗಳು
ಬ್ಯಾಟಿಂಗ್: ಗಳಿಸಿದ್ದು 2224 ರನ್‌, ಅದರಲ್ಲಿ 9 ಅರ್ಧಶತಕ, 2 ಶತಕ, ಗರಿಷ್ಠ ಮೊತ್ತ 115
ಬೌಲಿಂಗ್: ಪಡೆದಿದ್ದು 417 ವಿಕೆಟ್‌, ಅತ್ಯದ್ಭುತ ನಿರ್ವಹಣೆ 84 ರನ್‌ಗಳಿಗೆ 8 ವಿಕೆಟ್‌, 5 ವಿಕೆಟ್‌ ಗೊಂಚಲು 25 ಸಲ

ಒನ್‌ಡೇ ಕರಿಯರ್: ಒಟ್ಟು 236 ಏಕದಿನ ಪಂದ್ಯಗಳು:
ಬ್ಯಾಟಿಂಗ್: ಗಳಿಸಿದ್ದು 1237 ರನ್‌, ಗರಿಷ್ಠ ಮೊತ್ತ 49
ಬೌಲಿಂಗ್: ಪಡೆದಿದ್ದು 269 ವಿಕೆಟ್‌, ಅತ್ಯದ್ಭುತ ನಿರ್ವಹಣೆ 31 ರನ್‌ಗಳಿಗೆ 5 ವಿಕೆಟ್‌ 5 ವಿಕೆಟ್‌ ಗೊಂಚಲು 3 ಸಲ

Marjala Manthana Turbanator Harbhajan saaksha tv

ಟಿ-20 ಇಂಟರ್‌ನ್ಯಾಷನಲ್‌ ಕರಿಯರ್: ಒಟ್ಟು 28 ಟಿ-20 ಮ್ಯಾಚ್‌ಗಳು
ಬ್ಯಾಟಿಂಗ್: ಗಳಿಸಿದ್ದು 108 ರನ್‌, ಗರಿಷ್ಠ ಮೊತ್ತ 21
ಬೌಲಿಂಗ್: ಪಡೆದಿದ್ದು 25 ವಿಕೆಟ್‌, ಅತ್ಯದ್ಭುತ ನಿರ್ವಹಣೆ 12 ರನ್‌ಗಳಿಗೆ 4 ವಿಕೆಟ್‌,
*

ಪಂಜಾಬ್‌ ಪುತ್ತರ್‌ ಹರ್ಭಜನ್ ಸಿಂಗ್ ಜನಿಸಿದ್ದು ಜುಲೈ 3, 1980ರಂದು. ಭಜ್ಜಿ ತಮ್ಮ ಚೊಚ್ಚಲ ಟೆಸ್ಟ್ ಆಡಿದ್ದು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಭಜ್ಜಿಯ ವಿಶೇಷತೆ ಎಂದರೆ ಎಂತಹ ಸಂದರ್ಭದಲ್ಲಿಯೂ ಹತಾಶೆಗೊಳ್ಳುವುದಿಲ್ಲ. ಪಂದ್ಯಗಳನ್ನು ಸುಲಭವಾಗಿ ಬಿಟ್ಟುಕೊಡಬಾರದು. ಸೋಲುವ ಕೊನೆಯ ಹಂತದ ತನಗ ಸೆಣೆಸಬೇಕು ಅನ್ನುವುದು ಹರ್ಭಜನ್‌ ಸಿದ್ಧಾಂತ. ಹೀಗಾಗಿ ಒಂದಿಡೀ ದಶಕಕ್ಕೂ ಹೆಚ್ಚು ಕಾಲ ಭಜ್ಜಿ ಭಾರತ ತಂಡದ ಸ್ಪಿನ್‌ ವಿಭಾಗದ ನೇತೃತ್ವ ವಹಿಸಿದ್ದರು. ದೂಸ್ರಾ ಕಿಂಗ್‌ ಭಜ್ಜಿ ಇಂಡಿಯನ್‌ ಕ್ರಿಕೆಟ್‌ ಟೀಮ್‌ನಲ್ಲಿ ತಮ್ಮ ಕ್ರಿಕೆಟ್‌ ವೃತ್ತಿ ಬದುಕು ಆರಂಭಿಸುವಾಗ ಅವರಿಗೆ 18 ವರ್ಷ.

ಹರ್ಭಜನ್ ಸಿಂಗ್ ಅವರ ತಂದೆ ಸರ್ದಾರ್ ಸರ್ದೇವ್ ಸಿಂಗ್ ಪ್ಲಾಹಾ ಬಾಲ್ ಬೇರಿಂಗ್ ಮತ್ತು ವಾಲ್ವ್ ಫ್ಯಾಕ್ಟರಿ ಹೊಂದಿದ್ದರು. ಹೀಗಾಗಿ ತಮ್ಮ ತಂದೆಯ ವ್ಯವಹಾರವನ್ನು ನಿಭಾಯಿಸಲು ಭಜ್ಜಿ ಬಯಸಿದ್ದರು ಆದರೆ ಅವರ ತಂದೆ ಕ್ರಿಕೆಟ್ ಆಡಲು ಒತ್ತಾಯಿಸಿದರು.

ಹರ್ಭಜನ್‌ ಸಿಂಗ್‌ ಅವರ ಮೊದಲ ಕೋಚ್‌ ಹೆಸರು ಚರಣ್‌ಜಿತ್‌ ಸಿಂಗ್ ಭುಲ್ಲರ್. ಹರ್ಭಜನ್‌ಗೆ ಚರಣ್‌ಜಿತ್‌ ಬ್ಯಾಟ್‌ಮನ್‌ ಆಗಲು ತರಬೇತಿ ನೀಡುತ್ತಿದ್ದರು. ಆದರೆ ಚರಣ್‌ಜಿತ್‌ ಸಿಂಗ್‌ ಅವರ ಅಕಾಲಿಕ ಮರಣದ ನಂತರ ಹೊಸ ಕೋಚ್‌ ದೇವಿಂದರ್‌ ಅರೋರಾ ಸೂಚನೆಯ ಮೇರೆಗೆ ಹರ್ಭಜನ್‌ ಸ್ಪಿನ್‌ ಬೌಲಿಂಗ್‌ಗೆ ಆದ್ಯತೆ ನೀಡಿದರು.Marjala Manthana Turbanator Harbhajan saaksha tv

15ನೇ ವಯಸ್ಸಿನಲ್ಲಿ, ಸ್ಪಿನ್ ಜಾದೂಗಾರ ಪಂಜಾಬ್‌ನ ಅಂಡರ್-16 ತಂಡ ಪ್ರವೇಶಿಸಿ, ಆ ಪಂದ್ಯಾವಳಿಯ ನಾಲ್ಕು ಪಂದ್ಯಗಳಲ್ಲಿ 32 ವಿಕೆಟ್‌ ಪಡೆದರು. ಅವರ ಈ ಶ್ರೇಷ್ಠ ಪ್ರದರ್ಶನವೇ ನಂತರ ಅವರನ್ನು ಏಕದಿನ ಸರಣಿಗಾಗಿ ಉತ್ತರ ವಲಯ ತಂಡದಲ್ಲಿ ಸ್ಥಾನ ನೀಡಿತು.

1997ರ ರಣಜಿ ಟ್ರೋಫಿ ಋತುವಿನಲ್ಲಿ ಪಂಜಾಬ್ ಪರ ಸರ್ವಿಸಸ್ ವಿರುದ್ಧ ತಮ್ಮ ಮೊದಲ ದೇಶೀಯ ಪಂದ್ಯ ಆಡಿದ ಭಜ್ಜಿ 3 ವಿಕೆಟ್ ಪಡೆದರು. ಹರ್ಭಜನ್‌ ಸಿಂಗ್ 198 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 780 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. 1998ರ ವಿಶ್ವಕಪ್ ಅಂಡರ್-19 ಭಾರತೀಯ ತಂಡದ ಭಾಗವಾಗಿ, ಅವರು 6 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದರು

ಹರ್ಭಜನ್‌ ಹುಟ್ಟಿದ್ದು ಜುಲೈ 3; ಹೀಗಾಗಿಯೇ ಅವರ ಜೆರ್ಸಿ ನಂಬರ್‌ ಸಹ ಮೂರು. ಭಜ್ಜಿಯ ಅದೃಷ್ಟ ಸಂಖ್ಯೆ ಈ 3. ಹರ್ಭಜನ್‌ ತಂದೆ ಕೂಡಾ ಅಕಾಲಿಕ ಸಾವನ್ನಪ್ಪಿದ್ದರಿಂದ ಐವರು ಸಹೋದರಿಯರಿದ್ದ ಕುಟುಂಬ ನಿರ್ವಹಣೆ ಭಜ್ಜಿ ಹೆಗಲೇರಿತ್ತು. 2001ರಲ್ಲಿ ಒಂದೇ ವರ್ಷದಲ್ಲಿ ಭಜ್ಜಿ ತಮ್ಮ ಮೂವರು ಸಹೋದರಿಯರ ಮದುವೆ ಮಾಡಿ ಮುಗಿಸಿದ್ದರು.

2003ರಲ್ಲಿ ಕೇಂದ್ರ ಸರ್ಕಾರ ಹರ್ಭಜನ್‌ಗೆ ಅರ್ಜುನ ಪ್ರಶಸ್ತಿಯನ್ನೂ 2009ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿತು. ಹರ್ಭಜನ್‌ ಸಿಂಗ್‌ಗೆ ಭಜ್ಜಿ ಎಂದು ಅಡ್ಡ ಹೆಸರಿಟ್ಟುವರು ಇಂಡಿಯಾ ಕ್ರಿಕೆಟ್‌ ಟೀಂನ ಮಾಜಿ ವಿಕೆಟ್‌ ಕೀಪರ್‌ ನಯನ್‌ ಮೋಂಗಿಯಾ. ಈ ಹೆಸರು ಅದೆಷ್ಟು ಪ್ರಖ್ಯಾತವಾಯಿತೆಂದರೆ ಖುದ್ದು ಹರ್ಭಜನ್‌ ಸಿಂಗ್‌, 2009ರಲ್ಲಿ “ಭಜ್ಜಿ” ಹೆಸರಿನ ಪೇಟೆಂಟ್‌ ಪಡೆದುಕೊಳ್ಳಬೇಕಾಯಿತು. “ದಿ ಟರ್ಬನೇಟರ್‌” ಅನ್ನುವುದೂ ಸಹ ಭಜ್ಜಿ ಪ್ರಸಿದ್ಧ ಅಡ್ಡ ಹೆಸರು.

Cricketer by day, a policeman by night? -2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಸರಣಿಯ ನಂತರ ಹರ್ಭಜನ್ ಸಿಂಗ್ ಅವರಿಗೆ 2002ರಲ್ಲಿ ಅಂದಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿ ಹುದ್ದೆ ನೀಡಿದ್ದರು. ಆಸ್ಟ್ರೇಲಿಯನ್‌ ಪ್ರವಾಸದಲ್ಲಿ ಭಜ್ಜಿ ಹ್ಯಾಟ್ರಿಕ್‌ ಸಹಿತ 32 ವಿಕೆಟ್‌ ಕಿತ್ತಿದ್ದರು.

2001ರ ಸರಣಿ ಟರ್ಬನೇಟರ್‌ ಭಜ್ಜಿಗೆ ಮರೆಯಲಾಗದ ಸರಣಿ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ
ಹ್ಯಾಟ್ರಿಕ್ ವಿಕೆಟ್‌ ಪಡೆದ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಭಜ್ಜಿ ಪಾತ್ರರಾದರು. 400 ವಿಕೆಟ್‌ ಗಡಿ ದಾಟಿದ ಮೂರನೆಯ ಆಟಗಾರ ಮತ್ತು ಅತ್ಯಂತ ಕಿರಿಯ ಭಾರತೀಯ ಬೌಲರ್‌ ಎಂಬ ಖ್ಯಾತಿಯೂ ಭಜ್ಜಿಯದ್ದೆ. 2010ರಲ್ಲಿ, ನ್ಯೂಜಿಲ್ಯಾಂಡ್‌ ವಿರುದ್ಧ ಭಜ್ಜಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಶತಕಗಳನ್ನು ಗಳಿಸುವ ಮೂಲಕ ಇನ್ನೊಂದು ಹೊಸ ದಾಖಲೆ ಸೃಷ್ಟಿಸಿದರು.

ಹರ್ಭಜನ್ ಮೂರು ಚಲನಚಿತ್ರಗಳಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. 2004ರಲ್ಲಿ ತೆರೆಕಂಡ ಮುಜ್‌ ಸೆ ಶಾದಿ ಕರೋಗಿ, 2013ರಲ್ಲಿ ಬಿಡುಗಡೆಯಾದ ಭಾಜಿ ಇನ್ ಪ್ರಾಬ್ಲಮ್, 2015ರಲ್ಲಿ ಸೆಕೆಂಡ್ ಹ್ಯಾಂಡ್ ಹಸ್ಬೆಂಡ್.

Marjala Manthana Turbanator Harbhajan saaksha tvವಿವಾದಗಳು ಭಜ್ಜಿಯ ಬೆನ್ನು ಬಿಡಲಿಲ್ಲ. 2008ರಲ್ಲಿ, ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಹೊರಿಸಿ ಭಜ್ಜಿಯನ್ನು ಐಸಿಸಿ ನಿಷೇಧಿಸಿತ್ತು. ಅದೇ ವರ್ಷ ಐಪಿಎಲ್‌ ಪಂದ್ಯದಲ್ಲಿ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದ ಕಾರಣಕ್ಕೆ ಮೊದಲ ಐಪಿಎಲ್‌ನಿಂದ ನಿಷೇಧಿಸಲಾಯಿತು

2008ರಲ್ಲಿ ಸಿಡ್ನಿಯಲ್ಲಿ ಆಂಡ್ರ್ಯೂ ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನೆಗಾಗಿ ಹರ್ಭಜನ್ ಸಿಂಗ್ ರನ್ನು ಐಸಿಸಿ ನಿಷೇಧಿಸಿತ್ತಲ್ಲ, ನಂತರ ಐಸಿಸಿ ಅಪೀಲ್ಸ್ ಕಮಿಷನರ್ ಜಸ್ಟಿಸ್ ಜಾನ್ ಹ್ಯಾನ್ಸೆನ್ ಇದಕ್ಕೆ ಯಾವುದೇ ಪುರಾವೆಗಳಿಲ್ಲದ ಕಾರಣ ನಿಷೇಧವನ್ನು ತೆಗೆದುಹಾಕಿದರು. ಈ ಸಂದರ್ಭದಲ್ಲಿ ಮ್ಯಾಥ್ಯೂ ಹೇಡನ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ಮೈಕೆಲ್ ಕ್ಲಾರ್ಕ್ ಮುಂತಾದ ಹಿರಿಯ ಆಟಗಾರರ ಲಿಖಿತ ಮನವಿ ಸಲ್ಲಿಸಿ ಹರ್ಭಜನ್‌ ನಿಷೇಧ ಹಿಂಪಡೆದುಕೊಳ್ಳಲು ನಿವೇದಿಸಿಕೊಂಡಿದ್ದರು.

ಹರ್ಭಜನ್ ಸಿಂಗ್ ಎರಡು ಪ್ರಮುಖ ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದಾರೆ. 2011ರ ವಿಶ್ವಕಪ್ ಮತ್ತು 2007ರ ಟಿ 20 ವಿಶ್ವಕಪ್. ಪಂಜಾಬಿ ಆಫ್ ಸ್ಪಿನ್ನರ್ ಬದುಕಿನ ಸಂಗಾತಿಯಾದವರು ಬಾಲಿವುಡ್‌ ನಟಿ ಗೀತಾ ಬಸ್ರಾ; 2015ರಲ್ಲಿ ಭಜ್ಜಿ ವಿವಾಹವಾಯಿತು. ಭಜ್ಜಿ ಮಗಳ ಹೆಸರು ಹೀನಾ ಹೀರ್. ಹರ್ಭಜನ್ “ಭಜ್ಜಿ ಸ್ಪೋರ್ಟ್ಸ್” ಎಂಬ ಕ್ರೀಡಾ ಬ್ರಾಂಡ್ ಸಂಸ್ಥೆ ನಡೆಸುತ್ತಿದ್ದಾರೆ.

-ವಿಭಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd