Bihar : ಪ್ರೇಯಸಿಯನ್ನ ಭೇಟಿಯಾಗಲು ಹೋದವನಿಗೆ ಹೊಡೆದು ಬಡೆದು ಮದುವೆ ಮಾಡಿಸಿದ್ರು…
ಬಿಹಾರ : ಪ್ರೇಯಸಿಯನ್ನ ಭೇಟಿಯಾಗಲು ಗ್ರಾಮಕ್ಕೆ ಹೋದ ಯುವಕನಿಗೆ ಗ್ರಾಮಸ್ಥರು ಥಳಿಸಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆಯುವ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ.
ಹೌದು… ಆದಿತ್ಯ ಕುಮಾರ್ ಎಂಬ ಯುವಕ ತನ್ನ ಪ್ರೇಯಸಿಯನ್ನು ಹೊಲದಲ್ಲಿ ಭೇಟಿಯಾಗಲು ಹೋಗಿದ್ದ. ಇಬ್ಬರನ್ನೂ ಜೊತೆಯಲ್ಲಿರುವುದನ್ನು ಗಮನಿಸಿದ ಗ್ರಾಮಸ್ಥರು ಯುವಕನಿಗೆ ಮನಸೋಇಚ್ಛೆ ಥಳಿಸಿ ಅವನನ್ನು ಕೆಲ ಕಾಲ ಬಂಧನದಲ್ಲಿಟ್ಟು ನಂತರ ಆತನ ಪ್ರೇಯಸಿ ಜೊತೆಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ .
ಬಳಿಕ ಯುವತಿಯ ಪೋಷಕರು ಹಾಗೂ ಯುವಕನ ಪೋಷಕರು ಸ್ಥಳಕ್ಕೆ ಧಾವಿಸಿ ಬಲವಂತವಾಗಿಯೇ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಯಾವುದೇ ದೂರುಗಳು ದಾಖಲಾಗಿಲ್ಲ..