Marriage : ಚೀಪ್ ಲೆಹೆಂಗಾ ಕೊಟ್ಟರೆಂದು ಮದುವೆ ಬೇಡವೆಂದ ವಧು..!!
ಏನೇನೋ ಕಾರಣ ಕೊಟ್ಟು ಮದುವೆಯನ್ನ ಕೊನೆ ಘಳಿಗೆಯಲ್ಲಿ ಕ್ಯಾನ್ಸಲ್ ಮಾಡಿರುವಂತಹ ಅನೇಕ ಉದಾಹರಣೆಗಳಿವೆ.. ಆದ್ರೆ ಇಲ್ಲೊಬ್ಬ ವಧು ತನಗೆ ವರನ ಮನೆಯವರು ಕೊಟ್ಟಿರುವ ಲೆಹೆಂಗಾ ಕ್ವಾಲಿಟಿ ಚೀಪ್ / ಕಳಪೆ ಎಂಬ ಕಾರಣಕ್ಕೆ ಮದುವೆಯನ್ನೇ ಬೇಡವೆಂದಿದ್ದಾರೆ..
ಇಂತಹದೊಂದು ವಿಲಕ್ಷಣ ಘಟನೆ ನಡೆದಿರುವುದು ಉತ್ತರಾಖಂಡದ ಹಲ್ದಾವನಿಯಲ್ಲಿ.. ಹೆಲ್ತ್ ಕೇರ್ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದ ರಾಣಿಖೇತ್ ಮೂಲದ ಹುಡುಗನೊಂದಿಗೆ ಮದುವೆಯನ್ನು ನಿಶ್ಚಯಿಸಲಾಗಿತ್ತು.
ಮದುವೆಗೂ ಮೊದಲು ವರನ ತಂದೆ ಲಕ್ನೋದಿಂದ 10,000 ರೂ. ಮೌಲ್ಯದ ಲೆಹಂಗಾವನ್ನು ಆರ್ಡರ್ ಮಾಡಿದ್ದರು. ಈ ಆರ್ಡರ್ ಅನ್ನು ನೇರವಾಗಿ ವಧು ಮನೆಗೆ ಕಳುಸಿದ್ದರು.
ಆ ಲೇಹಂಗಾವನ್ನು ನೋಡಿದ ವಧು ಸಿಡಿಮಿಡಿಗೊಂಡಿದ್ದಾಳೆ.. ಕಡಿಮೆ ಕ್ವಾಲಿಟಿಯ ಲೆಹಂಗಾ ಎಂದು ಸಿಟ್ಟಾಗಿದ್ದು , ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ..
ಈ ಪ್ರಕರಣ ಹಲ್ದ್ವಾನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು , ಬಳಿಕ ಎರೆಡೂ ಕುಟುಂಬಗಳ ಸಮ್ಮತಿ ಮೇರೆಗೆ ಮದುವೆಯನ್ನು ರದ್ದುಗೊಳಿಸಲಾಗಿದೆ..