Marriage Proposal Reject : ಮದುವೆ ಪ್ರಸ್ತಾಪ ನಿರಾಕರಿಸಿದ ಮಹಿಳೆ ಕೊಲೆಗೈದು ದೇಹ ಪೀಸ್ ಪೀಸ್ ಮಾಡಿ ಬಿಸಾಡಿದ ಕಿಡಿಗೇಡಿ…
ಮಧ್ಯ ಕಾಶ್ಮೀರದಲ್ಲಿ ಮಹಿಳೆಯ ಭೀಕರ ಕೊಲೆ
ಮದುವೆ ಪ್ರಸ್ತಾಪ ನಿರಾಕರಿಸಿದಕ್ಕೆ ಹತ್ಯೆ
ದೇಹ ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿಡಿಗೇಡಿ
45 ವರ್ಷದ ಶಹಬಾಜ್ ಅಹ್ಮದ್ ಆರೋಪಿ
30 ವರ್ಷದ ಮಹಿಳೆಯ ಕೊಲೆ , ಆರೋಪಿ ಬಂಧನ
ಮದುವೆ ಪ್ರಸ್ತಾಪ ನಿರಾಕರಿಸಿದಕ್ಕೆ ಮಹಿಳೆಯನ್ನ ಅತ್ಯಂತ ಭೀಕರವಾಗಿ ಕೊಲೆಗೈದು ದೇಹವನ್ನ ಹಲವಾರು ತುಂಡುಗಳಾಗಿ ಕತ್ತರಿಸಿ ಪ್ರತ್ಯೇಕ ಸ್ಥಳಗಳಲ್ಲಿ ಬಿಸಾಡಿರುವ ಘಟನೆ ಇದೀಗ ಮಧ್ಯ ಕಾಶ್ಮೀರದಲ್ಲಿ ವರದಿಯಾಗಿದೆ..
ಆರೋಪಿಯು ಬುಡ್ಗಾಮ್ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಆಕೆಯ ದೇಹದ ತುಂಡುಗಳನ್ನ ಎಸೆದಿದ್ದಾನೆ.. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ..
ಪ್ರಾಥಮಿಕ ವರದಿಗಳ ಪ್ರಕಾರ ಸ್ನಾತಕ ಶಿಕ್ಷಣ ಪಡೆಯುತ್ತಿದ್ದ 30 ವರ್ಷದ ಮಹಿಳೆ ಮಾರ್ಚ್ 7 ರಿಂದ ನಾಪತ್ತೆಯಾಗಿದ್ದರು. ಮಹಿಳೆಯ ಕರೆ ವಿವರಗಳ ಆಧಾರದ ಮೇಲೆ ಪೊಲೀಸರು ಶಬೀರ್ ಅಹ್ಮದ್ ಎಂಬಾತನನ್ನ ನನ್ನು ಮಾರ್ಚ್ 8 ರಂದು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಶನಿವಾರದಂದು ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
45 ವರ್ಷದ ಅಹ್ಮದ್ ನನ್ನ ವಿಚಾರಣೆ ನಡೆಸಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.. ಅಹ್ಮದ್ ವಿವಾಹಿತನಾಗಿದ್ದ.. ಬದ್ಗಾಮ್ ಜಿಲ್ಲೆಯ ಓಂಪೋರಾ ಪ್ರದೇಶದಲ್ಲಿ ವಾಸಿಸುತ್ತಿದ್ದ..
ಕೊಲೆಯ ಉದ್ದೇಶವನ್ನು ಪೊಲೀಸರು ಇನ್ನೂ ಬಹಿರಂಗಪಡಿಸದಿದ್ದರೂ, ಮಹಿಳೆಯ ಸಂಬಂಧಿಕರು ಈತ ಮದುವೆಯ ಪ್ರಸ್ತಾಪದೊಂದಿಗೆ ತನ್ನ ಕುಟುಂಬವನ್ನು ಸಂಪರ್ಕಿಸಿದ್ದನು, ಆದರೆ ಮಹಿಳೆ ಅದನ್ನು ತಿರಸ್ಕರಿಸಿದ್ದಳು ಎಂದು ತಿಳಿಸಿದ್ದಾರೆ..
ಕಳೆದ ನಾಲ್ಕು ದಿನಗಳಿಂದ ಮಹಿಳೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಆರೋಪಿಯು ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ರೈಲ್ವೆ ಸೇತುವೆ ಓಂಪೊರಾ ಮತ್ತು ಸೆಬ್ಡೆನ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.
ಆತನನ್ನ ಬಂಧಿಸಲಾಗಿದ್ದು, ಆತನ ಮನೆಯಿಂದ ಆಕೆಯ ತಲೆ ಸೇರಿದಂತೆ ದೇಹದ ಎಲ್ಲಾ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಕುಟುಂಬವು ಅಹ್ಮದ್ ತನ್ನ ಮನೆಗೆ ಟೈಲ್ಸ್ ಸಂಬಂಧಿತ ಕೆಲಸಕ್ಕಾಗಿ ಭೇಟಿ ನೀಡುತ್ತಿದ್ದ ಎಂದು ಹೇಳಿಕೊಂಡಿದೆ.
ಸಂತ್ರಸ್ತೆ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ, ಅಹ್ಮದ್ ತನ್ನ ಸ್ವಾಭಿಮಾನವನ್ನು ಕಳೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದ ಎಂದು ಮಹಿಳೆಯ ಸೋದರಸಂಬಂಧಿ ಹೇಳಿದ್ದಾರೆ.
ಈ ಘಟನೆಯು ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣವನ್ನ ನೆನಪಿಸುತ್ತಿದೆ.. ಅಲ್ಲಿ 27 ವರ್ಷದ ಯುವತಿಯನ್ನು ಆಕೆಯ ಲಿವ್-ಇನ್ ಪಾರ್ಟ್ ನರ್ ಆಫ್ತಾಬ್ ಅಮೀನ್ ಪೂನಾವಾಲಾ ಕತ್ತು ಹಿಸುಕಿ ಕೊಂದಿದ್ದ. ನಂತರ ಆತ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಅರಣ್ಯದಲ್ಲಿ ಬಿಸಾಡಿ ಬಂದಿದ್ದ..
Marriage Proposal Reject : The woman who rejected the marriage proposal was murdered and her body was dismembered.