5 ದಿನದಲ್ಲಿ 2 ಮದ್ವೆಯಾದ ಟೆಕ್ಕಿ : 6ನೇ ದಿನಕ್ಕೆ ನಾಪತ್ತೆ..!
ಗಂಡಂದಿರು 2-3 ಮದುವೆಯಾಗಿ ಪತ್ನಿಯರಿಗೆ ಮೋಸ ಮಾಡಿರೋ ಪ್ರಕರಣಗಳು ಇದೇ ಮೊದಲೇನಲ್ಲ.. ಆದ್ರೆ ಈ ಭೂಪ ಕೇವಲ 5 ದಿನಗಳ ಅಂತರದಲ್ಲಿ 2 ಮದುವೆಗಳನ್ನ ಆಗಿದ್ದಾನೆ. ತನ್ನ ಅಸಲಿಯತ್ತು ಹೆಂಡತಿಯರ ಮುಂದೆ ಬಯಲಾಗ್ತಿದ್ದಂತೆ ಇಬ್ಬರು ಹೆಂಡತಿಯರಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಇಂತಹದ್ದೊಂದು ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. 26 ವರ್ಷದ ಈತನ ಹೆಸರು ನವೀನ್ ಪಾಂಚಾಲ್. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಈತನ ಮೊದಲನೇ ಪತ್ನಿ ಖಾಂದ್ವಾ ಮೂಲದ ಪೂಜಾ. ಈಕೆ ಜೊತೆಗೆ ಡಿ.2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ. ಪೂಜಾ ತಂದೆ ಲಕ್ಷಾಂತರ ರೂಪಾಯಿಗಳ ವರದಕ್ಷಿಣೆ ನೀಡಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಬಳಿಕ ಪ್ರಸ್ತದ ನಂತರ ಮೊದಲ ಪತ್ನಿಯನ್ನ ಆಕೆಯ ತವರು ಮನೆಯಲ್ಲೇ ಬಿಟ್ಟು ಬಂದಿದ್ದ.
ಚೇತರಿಕೆ ಹಾದಿಯಲ್ಲಿದೆ… ಆದರೂ ದುರ್ಬಲವಾಗಿದೆ ಭಾರತದ ಆರ್ಥಿಕತೆ..!
ಇದಾದ ಕೇವಲ 5ದಿನಗಳ ಅಂತರದೊಳಗೆ ಮತ್ತೊಬ್ಬಳ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಹೌದು ಡಿಸೆಂಬರ್ 7ರಂದು ಗಣೇಶಪುರಿ ಕಾಲೋನಿ ನಿವಾಸಿ ನಂದಿನಿ ಜಾಧವ್ ಎಂಬಾಕೆಯನ್ನ ವಿವಾಹವಾಗಿದ್ದಾನೆ. ತನ್ ಸ್ನೇಹಿತರನ್ನ ಮದುವೆಗೆ ಕರೆದೊಯ್ದು ಅವರೇ ತಮ್ಮ ಸಂಬಂಧಿಕರು ಎಂದು ವಧುವಿನ ಕುಟುಂಬಕ್ಕೆ ಪರಿಚಯಿಸಿದ್ದಾನೆ. ಇನ್ನೂ ವೇದಿಕೆ ಮೇಲೆ ವಧುವಿನ ಜೊತೆಗೆ ವರನನ್ನ ಕಂಡು ಮದುವೆಗೆ ಬಂದಿದ್ದ ಅಥಿತಿಗಳು ಶಾಕ್ ಆಗಿದ್ದಾರೆ. ನವೀನ್ ಮೊದಲ ಮದುವೆಗೆ ಬಂದಿದ್ದ ಅತಿಥಿಗಳು ಈಮದುವೆಗೂ ಹಾಜರಾಗಿದ್ದು ವರನನ್ನ ಕಂಡು ಹೌಹಾರಿದ್ದಾರೆ. ಬಳಿಕ ನಂದಿನಿ ಪೋಷಕರಿಗೆ ಈತನ ಹಿಂದಿನ ಮದುವೆಯ ಫೋಟೋ ತೋರಿಸಿ, ಆತನ ಅಸಲಿ ಮುಖವಾಡವನ್ನ ಕಳಚಿದ್ದಾರೆ. ಇತ್ತ ಗುಟ್ಟು ರಟ್ಟಾಗ್ತಿದ್ದಂತೆ ನವೀನ್ ಎಸ್ಕೇಪ್ ಆಗಿದ್ದಾನೆ. ನವೀನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ನಂದಿನಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ನವೀನ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel