ಹೋಟೆಲ್ ಗೆ ಲಕ್ಷಾಂತರ ರೂಪಾಯಿ ವಂಚಿಸಿ, ಐನಾತಿ ದಂಪತಿ ಎಸ್ಕೇಪ್..!
ಗೋವಾ ಮೂಲದ ಐನಾತಿ ದಂಪತಿ ಐಶಾರಾಮಿ ಹೋಟೆಲ್ ಒಂದಕ್ಕೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈತ ತಾನು ವಿಐಪಿ ಎಂದು ಹೇಳಿಕೊಂಡು ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ. ಆದ್ರೆ ಚೆಕೌಟ್ ಮಾಡಿ ಬಿಲ್ ಪಾವತಿ ಮಾಡುವ ಸಮಯ ಬಂದಾಗ ಈ ಖತರ್ನಾಕ್ ದಂಪತಿ ಹೋಟೆಲ್ ನಿಂದ ಪರಾರಿಯಾಗಿದ್ದಾರೆ. ಆರೋಪಿಯನ್ನ ಸ್ವಪ್ನಿಲ್ ನಾಯಕ್ ಎಂದು ಗುರುತಿಸಲಾಗಿದೆ.
ನಾಯಿ ಕೊಲ್ಲಲು ರೌಡಿ ಶೀಟರ್ ಗೆ ಸುಪಾರಿ ಕೊಟ್ಟ ನೀಚ..! ಇಬ್ಬರ ಬಂಧನ
ಈತ ವಿಐಪಿ ಎಂದು ಹೇಳಿಕೊಂಡು ತನ್ನ ಅಂಗರಕ್ಷಕರಿಗೂ ಮೋಸ ಮಾಡಿದ್ದ ಎನ್ನಲಾಗಿದೆ. ಪೊಲೀಸರ ವರದಿ ಪ್ರಕಾರ ನಾಯಕ್ ಜನವರಿ 2ರಂದು ಗಾಂಧಿನಗರದ ಜಿಯಾನ್ ಹೋಟೆಲ್ ಗೆ ಆಗಮಿಸಿ ಕೊಠಡಿ ಕಾಯ್ದಿರಿಸಿದ್ದ ಎನ್ನಲಾಗಿದೆ. 6 ದಿನಗಳ ಬಳಿಕ ನಾಯಕ್ ಪತ್ನಿ ಜನವರಿ 8ನೇ ತಾರೀಖಿನಂದು ತನ್ನ ಅಂಗರಕ್ಷಕರಿಗೆ ಇನ್ನೂ ಎರಡು ಕೊಠಡಿಗಳನ್ನ ಬುಕ್ ಮಾಡಿದ್ದರು ಎನ್ನಲಾಗಿದೆ. ಒಂದು ದಿನದ ಬಳಿಕ ಅವರು ಮಿನಿ ಬಸ್ ಒಂದನ್ನ ತೆಗೆದುಕೊಂಡು ರಾಮನಗರ ಕಡೆ ಪ್ರವಾಸಕ್ಕೆ ಹೋದವರು ಮತ್ತೆ ಹೋಟೆಲ್ಗೆ ವಾಪಸ್ಸಾಗಿಲ್ಲ.
ಅಷ್ಟೇ ಅಲ್ಲ ಈ ಐನಾತಿ ದಂಪತಿ ಅಂಗರಕ್ಷಕರು ಹಾಗೂ ಮಿನಿ ಬಸ್ ಮಾಲೀಕನಿಗೂ ಹಣ ನೀಡದೇ ವಂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಹೋಟೆಲ್ ಸಿಬ್ಬಂದಿ ದೂರಿನನ್ವಯ ಆಹಾರ ಹಾಗೂ ವಸತಿ ಸೇರಿದಂತೆ ಹೋಟೆಲ್ ನಲ್ಲಿ 1,43,243 ರೂಪಾಯಿ ಬಿಲ್ ಪಾವತಿ ಮಾಡಬೇಕಿದೆಯಂತೆ. ಸದ್ಯ ಇವರಿಬ್ಬರೂ ಸಹ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಾಯಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel