ಬೆಂಗಳೂರು: ವಿವಾಹಿತ ಮಹಿಳೆ (Married Women) ಯೋರ್ವಳು ಅನೈತಿಕ ಸಂಬಂಧದ ಹಿಂದೆ ಬಿದ್ದು ಕೊಲೆಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪಿ ಬಂಧನವಾಗಿದ್ದು, ಪೊಲೀಸ್ ತನಿಖೆ ವೇಳೆ ಆರೋಪಿಯ ವಿಕೃತಿ, ಕ್ರೌರ್ಯ ಬಯಲಾಗಿದೆ. ಹರಿಣಿ (36) ಕೊಲೆಯಾದ ಪ್ರಿಯತಮೆ, ಟೆಕ್ಕಿ ಯಶಸ್ (25) ಕೊಲೆ ಆರೋಪಿ.
ಪ್ರಿಯತಮೆಯನ್ನ (Lovers) ಮೀಟ್ ಮಾಡದೇ ತಲೆ ಕೆಡಿಸಿಕೊಂಡಿದ್ದ ಟೆಕ್ಕಿ ಆಕೆ ಸಿಗುತ್ತಿದ್ದಂತೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿಗೆ (Oyo Room) ಕರೆದೊಯ್ದು, ಹರಿಣಿಗೆ ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೆಂಗೇರಿ ಮೂಲದ ಹರಿಣಿ, ದಾಸೇಗೌಡ ಎಂಬವರ ಪತ್ನಿ. ಕೆಲವು ತಿಂಗಳ ಹಿಂದೆ ಜಾತ್ರೆಯಲ್ಲಿ ಇಬ್ಬರೂ ಪರಿಚಯವಾಗಿದ್ದಾರೆ. ಆಗ ಟೆಕ್ಕಿ ಯಶಸ್, ಮಹಿಳೆಯನ್ನು ಪರಿಚಯ ಮಾಡಿಕೊಡಿಂದ್ದಾನೆ. ಆನಂತರ ಇಬ್ಬರೂ ಫೋನ್ ನಲ್ಲಿ ಮಾತುಕತೆ ಆರಂಭಿಸಿದ್ದಾರೆ. ಮತ್ತಷ್ಟು ಹತ್ತಿರವಾಗಿ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಇದು ಗೊತ್ತಾಗುತ್ತಿದ್ದಂತೆ ಪತಿ, ಪತ್ನಿಗೆ ಬೈದು ರೂಮ್ ನಲ್ಲಿ ಕೂಡಿ ಹಾಕಿದ್ದಾರೆ. ಆದರೆ, ಹೋಗೋ ಫೋನ್ ಮಾಡಿ ಪತ್ನಿ, ಪ್ರಿಯಕರನ ಭೇಟಿಗೆ ಹೋಗಿದ್ದಾಳೆ.
ಆ ವೇಳೆ ಬಿಟ್ಟು ಬಿಡುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ, ನನಗೆ ಸಿಗದಿದ್ದರೆ ಯಾರಿಗೂ ನೀನು ಸಿಗುವುದು ಬೇಡ ಎಂದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.