ಬರಿ ಅಲಂಕಾರಕ್ಕೆ , ಪೂಜೆಗಷ್ಟೇ ಬಳಕೆಯಾಗಲ್ಲ ಚೆಂಡು ಹೂ..! ಇದರಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು..!
ಚೆಂಡು ಹೂ.. ನೋಡಲು ಸುಂದರ ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ಆಕರ್ಶಕ ಹೂ. ದೇವರಿಗೆ ಪೂಜೆಗೆ ಬಳಸುವುದು ಕಡಿಮೆಯಾದರೂ, ಅಲಂಕಾರಕ್ಕೆ , ಬಣ್ಣ ತಯಾರಿಕೆಯಲ್ಲಿ, ಸುಗಂಧ ತಯಾರಿಕೆಯಲ್ಲಿ ಚೆಂಡು ಹೂಗಳು ಹೆಚ್ಚು ಬಳಕೆಯಾಗುತ್ತೆ. ಚೆಂಡು ಹೂಗೆ ದೀಪಾವಳಿಯಲ್ಲಂತೂ ಎಲ್ಲಿಲ್ಲಿದ ಬೇಡಿಕೆ ಬಂದು ಬಿಡುತ್ತೆ. ಚೆಂಡು ಹೂವಿನಲ್ಲಿ ನಾನಾ ಔಷಧೀಯ ಗುಣಗಳು ಇವೆ.

ಚೆಂಡುಹೂ ಮೂಲತಹ ಮೆಕ್ಸಿಕನ್ ನ ತಳಿ. ಕೆಲ ತಜ್ಞರು ತಿಳಿಸಿರೋ ಹಾಗೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಚೆಂಡು ಹೂ ಬಂತೆಂದು ಹೇಳಲಾಗಿದೆ. ಈ ಗಿಡವು ಪೊದೆಯಂತೆ ಬೆಳೆಯುತ್ತದೆ. ಸರಳವಾದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಎಲೆಗಳಿಗೆ ವಾಸನೆಯಿರುತ್ತದೆ. ಸರಳವಾದ ಎಲೆಗಳು ಸೀಳುವುದರಿಂದ ಸಂಯುಕ್ತ ಎಲೆಯಂತೆ ಕಾಣುತ್ತದೆ. ಹಳದಿ ಅಥವ ಕಿತ್ತಲೆ ಬಣ್ಣದಲ್ಲಿ ಈ ಹೂಗಳು ಬೇಳೆಯುತ್ತವೆ.
ಈ ಹೂವಿಗೆ ಕನ್ನಡದಲ್ಲಿ ಚೆಂಡು ಹೂ ಅಂದ್ರೆ, ಇಂಗ್ಲಿಷ್ ನಲ್ಲಿ ಮೆಕ್ಸಿಕನ್ ಮಾರಿಗೋಲ್ಡ್, ಹಿಂದಿಯಲ್ಲಿ ಗೇಂಡಾ ಫೂಲ್ ಅಂತಾರೆ. ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬೆಳೆಸುವ ಈ ಹೂವನ್ನು ಹಾರಕ್ಕಾಗಿ, ವೇದಿಕೆ ಅಲಂಕರಣ, ಬಣ್ಣ ತಯಾರಿಕೆ ಮತ್ತಿತರ ಉದ್ದೇಶಗಳಿಗೆ ಕೂಡ ಬಳಸುತ್ತಾರೆ.
ಆರೋಗ್ಯ ಪ್ರಯೋಜನಗಳು
ರಕ್ತ ಶುದ್ಧಿ
ಈ ಹೂಗಳಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೂದಳದ ರಸ ಕುಡಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.
ಕೂದಲಿನ ವರ್ಣ ಹೆಚ್ಚಿಸುತ್ತೆ.
ಈ ಹೂಗಳ ರಸ, ಕಬ್ಬಿಣದ ಅದಿರು ಮತ್ತೆ ಎಳ್ಳೆಣ್ಣೆ ಸೇರಿಸಿ ಕಬ್ಬಿಣದ ಪಾತ್ರಯಲ್ಲಿ ಮುಚ್ಚಿ ಭೂಮಿಯಲ್ಲಿ ಒಂದು ತಿಂಗಳು ಹುದುಗಿದಬೇಕು. ಒಂದು ತಿಂಗಳ ನಂತರ ಈ ಮಿಶ್ರಣವನ್ನ ಅರೆದು ಸೋಸಿ ತೈಲ ತೆಗೆದು ಕೂದಲಿಗೆ ಹಚ್ಚಿದರೆ ಕೂದಲಿನ ಕಾಂತಿ ಹೆಚ್ಚಾಗುತ್ತೆ.








