ಮಂಗಳೂರು, ಸೆಪ್ಟೆಂಬರ್29: ಸಂಜೆಯ ಸಮಯದಲ್ಲಿ ನೀವು ಪೂರ್ವ ಆಕಾಶದತ್ತ ಕಣ್ಣು ಹಾಯಿಸಿದರೆ ಮಂಗಳ ಗ್ರಹವು ಹವಳದಂತೆ ಕೆಂಬಣ್ಣದಲ್ಲಿ
ಹೊಳೆಯುತ್ತಿರುವುದನ್ನು ಕಾಣಬಹುದು.
ಇದನ್ನು ನೀವು ಈ ತಿಂಗಳು ಪೂರ್ತಿ ಕಾಣಬಹುದಾಗಿದೆ.
ಮಂಗಳ ಗ್ರಹವು ಅಕ್ಟೊಬರ್ 13ರಂದು ಭೂಮಿಗೆ ಸಮೀಪ ಬರುತ್ತಿದೆ. ಇದು ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ನಡೆಯುವ ವಿದ್ಯಮಾನವಾಗಿದ್ದು, ಭೂಮಿಗೆ ಮಂಗಳ ಹತ್ತಿರಬರುವ ಈ ವಿಸ್ಮಯಕಾರಿ ಸನ್ನಿವೇಶವನ್ನು ಮಾರ್ಸ್ ಒಪೋಸಿಶನ್ ಎಂದು ಕರೆಯುತ್ತಾರೆ.
ಹೀಗೆ ಭೂಮಿಗೆ ಹತ್ತಿರ ಬಂದಾಗ ದೊಡ್ಡದಾಗಿ ಕಾಣುವ ಮಂಗಳಗ್ರಹವು ಇಡೀ ರಾತ್ರಿ ಹವಳದಂತೆ ಗೋಚರಿಸಲಿದೆ.
ಮಂಗಳ ಗ್ರಹಕ್ಕೆ ಸುಮಾರು 24 ಕೋಟಿ ಕಿಮೀ ದೂರದಲ್ಲಿರುವ ಸೂರ್ಯನಿಗೆ ದೀರ್ಘ ವ್ರತ್ತಾಕಾರದಲ್ಲಿ ಸುತ್ತು ಬರಲು 687 ದಿನಗಳು ಬೇಕು.
ಭೂಮಿಯೂ ಸುಮಾರು 15 ಕೋಟಿ ಕಿಮೀ ದೂರದಲ್ಲಿ ಸೂರ್ಯನ ಸುತ್ತುವುದರಿಂದ 2 ವರ್ಷ 50 ದಿನಗಳಲ್ಲಿ ಈ ಎರಡೂ ಗ್ರಹಗಳು, ಸಮಿಪಿಸಿ ದೂರಸರಿಯುತ್ತವೆ.
ಅಕ್ಟೋಬರ್ 13ರಂದು ಮಂಗಳಗ್ರಹವು ಭೂಮಿಗೆ 6.2 ಕೋಟಿ ದೂರದಲ್ಲಿ, ಹತ್ತಿರ ಬಂದು ದೊಡ್ಡದಾಗಿ ಸುಂದರವಾಗಿ ಕಾಣುತ್ತದೆ.
ಬಳಿಕ 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ ಸುಮಾರು 39 ಕೋಟಿ ಕಿಮೀ ದೂರದಲ್ಲಿರುತ್ತಾ, ಪುನಃ ಚಿಕ್ಕದಾಗಿ ಕಾಣಲಿದೆ.
ಈ ದಿನಗಳಲ್ಲಿ ಸಂಜೆಯ ಸಮಯದಲ್ಲಿ ನೀವು ಪೂರ್ವ ಆಕಾಶದತ್ತ ಕಣ್ಣು ಹಾಯಿಸಿದರೆ ಶುಕ್ರ ಗ್ರಹದ ಹೊಳಪನ್ನೂ ಮೀರಿಸುವಂತೆ ಮಂಗಳ ಗ್ರಹವು ಕೆಂಬಣ್ಣದ ಹವಳದಂತೆ ಹೊಳೆಯುತ್ತಿದೆ.
ಕೋವಿಡ್-19 ಸಮಯದಲ್ಲಿ ಕತ್ತೆ ಹಾಲಿನ ಆರೋಗ್ಯ ಪ್ರಯೋಜನಗಳು
ಈ ತಿಂಗಳು ಪೂರ್ತಿ ಇದನ್ನು ನೀವು ಕಾಣಬಹುದಾಗಿದ್ದು, ಅಕ್ಟೋಬರ್ ಒಂದರಂದು ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ.
ಇವುಗಳ ಜೊತೆಗೆ ಆಕಾಶದಲ್ಲಿ ಗುರು, ಶನಿ ಗ್ರಹಗಳನ್ನೂ ಸಹ ನೀವು ಬರೀ ಕಣ್ಣಿನಿಂದ ನೋಡಬಹುದಾಗಿದೆ.