Martin Teaser : ಮಾರ್ಟಿನ್ ಟೀಸರ್ ಥಿಯೇಟರ್ ನಲ್ಲಿ ರಿಲೀಸ್ – ಟಿಕೆಟ್ಸ್ ಕಂಪ್ಲೀಟ್ ಸೋಲ್ಡ್ ಔಟ್..!!
ಸಾಕಷ್ಟು ಕ್ರೇಜ್ ಹುಟ್ಟುಹಾಕಿರುವ ‘ಅದ್ಧೂರಿ’ ಜೋಡಿ ಧ್ರುವ ಹಾಗೂ ಅರ್ಜುನ್ ಕಾಂಪಿನೇಷನ್ ನ ಮಾರ್ಟಿನ್ ಸಿನಿಮಾದ ಒಂದೇ ಒಂದು ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ…
ಇದೀಗ ಕೊನೆಗೂ ಅವರೆಲ್ಲರಿಗೂ ಸಮಾಧಾನಕರ ಸುದ್ದಿ ಸಿಕ್ಕಿದೆ…
ಸಿನಿಮಾ ಟೀಸರ್ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ..
ಟೀಸರ್ ನೋಡಲು ವಿಶೇಷವಾಗಿ ಫ್ಯಾನ್ಸ್ ಗೆ ಥಿಯೇಟರ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ..
ಅಷ್ಟೇ ಅಲ್ಲ ಅದರ ಕಂಪ್ಲೀಟ್ ಟಿಕೆಟ್ಸ್ ಕೂಡ ಸೋಲ್ಡ್ ಔಟ್ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ..
ಬೆಂಗಳೂರು , ಅಗ್ರಹಾರ ದಾಸರಹಳ್ಳಿಯಲ್ಲಿರುವ ವೀರೇಶ್ ಥಿಯೇಟರ್ ನಲ್ಲಿ ಫೆಬ್ರವರಿ 23 ರಂದು ಟೀಸರ್ ರಿಲೀಸ್ ಗೆ ಸಿದ್ಧತೆ ಸಾಗುತ್ತಿದೆ..
ಇನ್ನೂ ವಿಶೇಷ ಅಂದ್ರೆ ಇದರಿಂದ ಬಂದ ಹಣವನ್ನ ಗೋಶಾಲೆಗಳಿಗೆ ಬಳಸಲು ಮಾರ್ಟಿನ್ ಸಿನಿ ತಂಡ ಚಿಂತನೆ ನಡೆಸಿದೆ ಎನ್ನಲಾಗಿದೆ..
ನೂರು ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ಮಾರ್ಟಿನ್ ಚಿತ್ರ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ರಿಲೀಸ್ ಆಗಿ ಅಬ್ಬರಿಸಲಿದೆ..
ಬೆಂಗೂಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್ ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆಯಕ್ಷನ್ ಸೀನ್ ಗಳು ಚಿತ್ರದಲ್ಲಿರಲಿದೆ.
ಫೆ.23 ಕ್ಕೆ ಚಿತ್ರದ ಟೀಸರ್ ಜೊತೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಗೂ ಪ್ಲಾನ್ ಮಾಡಿದ್ದಾರಂತೆ..








