ದೇಶದಲ್ಲಿ ಅರ್ಧದಷ್ಟೂ ಜನ ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ – ಆರೋಗ್ಯ ಸಚಿವಾಲಯ
ನವದೆಹಲಿ : ನವದೆಹಲಿ : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಅನೇಕ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ರೆ , ಇನ್ನೂ ಹಲವರು ಕುಟುಂಬಸ್ಥರು , ಆಪ್ತರು , ಸ್ನೇಹಿತರನ್ನ ಕಳೆದುಕೊಂಡಿದ್ದಾರೆ.. ಮತ್ತು ಹಲವು ಕುಟುಂಬಗಳ ಆಧಾರಸ್ಥಂಬವೆನಿಸಿಕೊಂಡಿದ್ದರು ಕೊರೊನಾಗೆ ಬಲಿಯಾಗಿದ್ದು, ಕುಟುಂಬಗಳು ದಿಚ್ಚು ತೋಚದ ಪರಿಸ್ಥಿತಿಗೆ ತಲುಪಿವೆ.. ಸಿನಿಮಾ ತಾರೆಯರು ಮೃತಪಟ್ಟಿದ್ದಾರೆ. ಸೆಲೆಬ್ರಿಟಿಗಳು ಸಹ ತಮ್ಮವರನ್ನ ಕಳೆದುಕೊಂಡಿದ್ದಾರೆ.. ಇನ್ನೂ ವಿಪರ್ಯಾಸವೆಂದ್ರೆ ಮದುವೆಗೆ ಇನ್ನು ಒಂದೆರೆಡು ದಿನಗಳಿರುವಾಗಲೇ ವರ ಅಥವ ವಧು ಮೃತಪಟ್ಟಿರುವ ಘಟನೆಗಳು , ಮದುವೆಯಾದ ವಾರ -10 ದಿನಗಳೊಳಗೇ ಗಂಡ ಅಥವ ಹೆಂಡತಿ ಸಾವನಪ್ಪಿರುವುದು ಇಂತಹ ಮನಕಲುಕುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ..
ನಿತ್ಯವೂ ಸಾವಿರಾರು ಜನರು ಈ ವೈರಸ್‌ನ ದಾಳಿಯಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಇಷ್ಟಲ್ಲಾ ಇದ್ದರೂ ಕೊರೊನಾ ವೈರಸ್ ಬಗೆಗಿನ ಅಗತ್ಯ ಮುಂಜಾಗ್ರತೆಗಳ ಬಗ್ಗೆ ಜನತೆ ಗಂಭೀರವಾಗಿರುವಂತೆ ತೋರುತ್ತಿಲ್ಲ. ಈ ನಡುವೆ ಆರೋಗ್ಯ ಸಚಿವಾಲಯವು ಆಘಾತಕಾರಿ ಮಾಹಿತಿಯೊಂದನ್ನ ಹೊರಹಾಕಿದೆ.. ಇಂತಹ ವಿಷಮ ಪರುಸ್ಥಿತಿಯಲ್ಲೂ ದೇಶದ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ದೇಶದಲ್ಲಿ ಅರ್ಧಷ್ಟೂ ಜನರು ಮಾಸ್ಕ್ ಧರಿಸದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದು, ತಮ್ಮ ಪ್ರಾಣದ ಜೊತೆಗೆ ಇತರ ಜೀವಗಳಿಗೂ ಕುತ್ತು ತರುತ್ತಿದ್ದಾರೆ.
ಭಾರತದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಇನ್ನೂ ಕೂಡ 50 ಶೇಕಡಾಕ್ಕಿಂತ ಹೆಚ್ಚು ಜನರು ಮಾಸ್ಕ್ ಧರಿಸುತ್ತಿಲ್ಲ ಎಂದು ಅಧ್ಯಯನವೊಂದರ ಅಂಕಿಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಹಿರಂಗ ಪಡಿಸಿದೆ. ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ದೇಶಾದ್ಯಂತ ಶೇಕಡಾ 50 ರಷ್ಟು ಜನರು ಮಾಸ್ಕ್ ಧರಿಸುವುದಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅದ್ರಲ್ಲೂ ಬಹುತೇಕರು ಸರಿಯಾಗಿ ಮಾಸ್ಕ್ ಧರಿಸುವುದಿಲ್ಲವೆಂದು ಆರೋಗ್ಯ ಸಚಿವಾಲಯ ಹೇಳಿದೆ. ಕೆಲವರು ಮೂಗಿನ ಕೆಳಗೆ ಮಾಸ್ಕ್ ಹಾಕಿದ್ರೆ ಮತ್ತೆ ಕೆಲವರು ಬಾಯಿ ಕೆಳಗೆ ಮಾಸ್ಕ್ ಹಾಕುತ್ತಾರೆಂದು ವರದಿಯಲ್ಲಿ ಹೇಳಲಾಗಿದೆ.
ದೇಶದಲ್ಲಿ ಶೇಕಡಾ 50ರಷ್ಟು ಜನರು ಮಾಸ್ಕ್ ಧರಿಸುತ್ತಾರೆ. ಶೇಕಡಾ 64ರಷ್ಟು ಮಂದಿ ಮೂಗಿಗೆ ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಶೇಕಡಾ 20ರಷ್ಟು ಮಂದಿ ಗಲ್ಲದ ಕೆಳಗೆ ಮಾಸ್ಕ್ ಧರಿಸುತ್ತಾರೆ. ಶೇಕಡಾ 2ರಷ್ಟು ಮಂದಿ ಕತ್ತಿಗೆ ಹಾಕಿಕೊಳ್ತಾರೆ. ಶೇಕಡಾ 14ರಷ್ಟು ಮಂದಿ ಸರಿಯಾಗಿ ಮಾಸ್ಕ್ ಧರಿಸುವುದಿಲ್ಲ. ಅಂದ್ರೆ ದೇಶದಲ್ಲಿ ಶೇಕಡಾ 7 ಮಂದಿ ಮಾತ್ರ ಮಾಸ್ಕ್ ಧರಿಸುತ್ತಾರೆಂದು ವರದಿಯಲ್ಲಿ ಹೇಳಲಾಗಿದೆ.
25 ನಗರಗಳಲ್ಲಿ 2000 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಿದಾಗ 50 ಶೇಕಡಾ ಜನರು ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಧರಿಸಿದ 50 ಶೇಕಡಾದಲ್ಲಿ 64 ಶೇಕಡಾ ಜನರು ಮೂಗನ್ನು ಸರಿಯಾಗಿ ಮುಚ್ಚಿರಲಿಲ್ಲ. 20 ಶೇಕಡಾ ಜನರು ಗಲ್ಲದಲ್ಲಿ ಮಾಸ್ಕ್ ಧರಿಸಿದ್ದರೆ, 2 ಶೇಕಡಾ ಜನರು ಕುತ್ತಿಗೆ ಭಾಗದಲ್ಲಿ ಮಾಸ್ಕ್ ಹಾಕಿಕೊಂಡಿದ್ದರು. 14 ಶೇಕಡಾ ಜನರು ಮಾತ್ರವೇ ಮೂಗು, ಬಾಯಿ, ಗಲ್ಲವನ್ನು ಮುಚ್ಚಿಕೊಂಡು ಸೂಕ್ತ ರೀತಿಯಲ್ಲಿ ಧರಿಸಿಕೊಂಡಿದ್ದರು ಎಂದು ಅಧ್ಯಯನದ ವರದಿಯನ್ನು ಬಹಿರಂಗಪಡಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.