ಈ ದೇಶದಲ್ಲಿ ಇನ್ಮುಂದೆ ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಅವಶ್ಯಕತೆ ಇಲ್ಲ..!

1 min read
cotton face mask

ಈ ದೇಶದಲ್ಲಿ ಇನ್ಮುಂದೆ ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಅವಶ್ಯಕತೆ ಇಲ್ಲ..!

ಇಸ್ರೇಲ್ : ಇಡೀ ವಿಶ್ವಕ್ಕೆ ವಿಶ್ವವೇ ಕೊರೊನಾ ಹಾವಳಿ ಅದ್ರಲ್ಲೂ ಕೊರೊನಾ 2ನೇ ಅಲೆಯಿಂದ ತ್ತರಿಸಿಹೋಗಿದೆ. 2ನೇ ಅಲೆ ಮೊದಲಿಗಿಂತಲೂ ಭೀಕರವಾಗಿ ಪದ್ರಲ್ಲೂ ಬಾರತದಲ್ಲಿ ತೀವ್ರವಾಗಿ ಅಪ್ಪಳಿಸಿದೆ. ಹೀಗಿರೋವಾಗ ಮಾಸ್ಕ್ ಇನ್ನೂ ಅದೆಷ್ಟು ವರ್ಷಗಳ ಕಾಲ ಧರಿಸಬೇಕಪ್ಪಾ ಅಂತ ವಿಶ್ವದ ಜನರು ಚಿಂತೆ ನಡೆಸುತ್ತಿರೋವಾಗ ಇಸ್ರೇಲ್ ನಲ್ಲಿ ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಅವಶ್ಯಕತೆಯಿಲ್ಲ ಎಂದು ಅಲ್ಲಿನ ಸರ್ಕಾರ ಜನರಿಗೆ ಸೂಚನೆ ನೀಡಿದೆ.

ಹೌದು.. ಕೊರೋನಾವೈರಸ್ ಸೋಂಕು ಪ್ರಕರಣಗಳ ಕುಸಿತದ ನಡುವೆ ಹೊರಾಂಗಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತುಂಬಾನೆ ಕಡಿಮೆ ಇರುವ ಹಿನ್ನೆಲೆ ಈ ದೇಶ ಈ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ ಕೋವಿಡ್ಸೋಂಕಿನ ಪ್ರಕರಣಗಳು ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಪ್ರೊ. ಹೆಜಿ ಲೆವಿ ಅವರು ಸಾರ್ವಜನಿಕ ಆರೋಗ್ಯ ಆದೇಶವನ್ನು ತಿದ್ದುಪಡಿ ಮಾಡಿದ್ದಾರೆ. ಇದರಿಂದಾಗಿ ತೆರೆದ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಿರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಆದರೂ, ದೊಡ್ಡ ಹೊರಾಂಗಣದಲ್ಲಿ ನಡೆಯುವ ಸಭೆ-ಸಮಾರಂಭ ಮತ್ತು ಕೂಟಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

‘ಕುಂಭಮೇಳದಿಂದ ಕೊರೊನಾ ಪ್ರಸಾದದ ರೂಪದಲ್ಲಿ ಹರಡಲಿದೆ’..!

ಕೊರೊನಾ ಹಾವಳಿ – JEE ಪರೀಕ್ಷೆ ಮುಂದೂಡಿಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd