ಮಕ್ಕಳ ಮುಂದೆ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ
ರಾಜಸ್ಥಾನ: ದುಷ್ಕರ್ಮಿಗಳು ಮಕ್ಕಳ ಮುಂದೆಯೇ ತಾಯಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.
26 ವರ್ಷದ ಮಹಿಳೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ. ಆರೋಪಿಗಳನ್ನು ಲಾಲು ಠಾಕೂರ್, ಧನ್ ಸಿಂಗ್ ಠಾಕೂರ್, ವಿಪಿನ್ ಠಾಕೂರ್, ಮೋಹಿತ್ ಠಾಕೂರ್, ಸಚಿನ್ ಠಾಕೂರ್ ಮತ್ತು ಲೋಕೇಂದ್ರ ಸಿಂಗ್ ಆರೋಪಿಗಳು. ಆರೋಪಿಗಳು ಮಾರ್ಚ್ 17 ರಂದು ಮಹಿಳೆಯೊಬ್ಬರು ಜಮೀನಿನಿಂದ ತನ್ನ ನಿವಾಸಕ್ಕೆ ಮರಳುತ್ತಿದ್ದಾಗ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.
ಸಂತ್ರಸ್ತೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ತಮ್ಮ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ದಂಪತಿಯನ್ನು ತಡೆದು ಥಳಿಸಿದ್ದಾರೆ. ನಂತರ ಪತಿಗೆ ಕಂಟ್ರಿಮೇಡ್ ಪಿಸ್ತೂಲ್ನಿಂದ ಹೊಡೆದಿದ್ದಾರೆ. ಇವರಿಂದ ತಪ್ಪಿಸಿಕೊಳ್ಳಲು ಪತಿ ಅಲ್ಲಿಂದ ಓಡಿ ಹೋಗಿದ್ದಾನೆ.
ನಂತರ ಪತ್ನಿ ಮತ್ತು ಮಕ್ಕಳು ಸ್ಥಳದಲ್ಲೇ ಇರುವುದನ್ನು ಗಮನಿಸಿದ ಆರೋಪಿಗಳು ಮಕ್ಕಳಿಗೆ ಬಂದೂಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ತಿಳಿದ ತಕ್ಷಣ ರಾಷ್ಟ್ರೀಯ ಮಹಿಳಾ ಆಯೋಗವು(NCW) ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಎನ್ಸಿಡಬ್ಲ್ಯು ರಾಜಸ್ಥಾನದ ಡಿಜಿಪಿಗೆ ಪತ್ರ ಬರೆದಿತ್ತು.
ಈ ಮನವಿಯ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಡಿ(ಗ್ಯಾಂಗ್ ರೇಪ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಕಾಂಚನ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಯಲ್ಲಿ ಬದುಕುಳಿದಿರುವವರು ಮತ್ತು ಪ್ರಕರಣದ ಆರೋಪಿಗಳು ಅದೇ ಗ್ರಾಮದವರು. ಪ್ರಕರಣದ ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಧೋಲ್ಪುರದ ಸರ್ಕಲ್ ಅಧಿಕಾರಿ ವಿಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.