ಆಟೋ ಮತ್ತು ಟಂಟಂ ನಡುವೆ ಭೀಕರ ಅಪಘಾತ | 1 ಸಾವು
ರಾಯಚೂರು: ಆಟೋ ಮತ್ತು ಟಂಟಂ ವಾಹನ ನಡುವೆ ಅಪಘಾತ ಸಂಭವಿಸಿ ಓರ್ವ ಬಾಲಕ ಸಾವನ್ನಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಬಳಿ ನಡೆದಿದೆ.
ಹುಲಿರಾಜ್ ಕರಿಯಪ್ಪ (15) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಮಾನವಿಯಿಂದ ಮಾನವಿ ಕಡೆ ಹೊರಟ್ಟಿದ್ದ ಆಟೋ ಹಾಗೂ ಮಾನವಿ ಮಾರ್ಗದಿಂದ ಬರುತ್ತಿದ್ದ ಟಂಟಂ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಗಾಯಾಳುಗಳು ಹಾಗೂ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ