ಪಪುವಾ ನ್ಯೂಗಿನಿಯಲ್ಲಿ 7.6 ತೀವ್ರತೆಯಲ್ಲಿ ಭೂಕಂಪ – ಸುನಾಮಿ ಎಚ್ಚರಿಕೆ..
ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ ಪ್ರಬಲ ಭುಕಂಪ ಸಂಭವಿಸಿದೆ 7.6 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸಾವು ನೋವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಕರಾವಳಿ ಪ್ರದೇಶವಾದ ಮಡಂಗ್ ಬಳಿ ಕಟ್ಟಡಗಳು ಹೆಚ್ಚು ಹಾನಿಗೊಳಗಾಗಿವೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ಸ್ಥಳೀಯ ಕಾಲಮಾನ 9:46 ಕ್ಕೆ ಸಂಭವಿಸಿದೆ. ರಾಜಧಾನಿ ಪೋರ್ಟ್ ಮಾರ್ಸೆಬೆಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಲೈನಲ್ಲಿ ಭೂಕಂಪನದ ಕೇಂದ್ರಬಿಂದುವಿದೆ.
https://twitter.com/i/status/1568763186148417536
ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಭೂಕಂಪನದಿಂದ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದೆ. ಭೂಕಂಪದ ತೀವ್ರತೆಯಿಂದಾಗಿ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇದೆ. ಇಂಡೋನೇಷ್ಯಾ ಬಳಿಯ ಪೆಸಿಫಿಕ್ ಮಹಾಸಾಗರದ ಪ್ರದೇಶದಲ್ಲಿರುವ ಪಪುವಾ ನ್ಯೂಗಿನಿಯಾ ಭೂಕಂಪಗಳಿಗೆ ತುಂಬಾ ದುರ್ಬಲವಾಗಿದೆ.








