ನವದೆಹಲಿ: ಆಸ್ಪತ್ರೆಯಲ್ಲಿ ಭಾರೀ ಬೆಂಕಿ ದುರಂತ (Massive Fire) ಸಂಭವಿಸಿದ ಪರಿಣಾಮ 6 ನವಜಾತ ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಡರಾತ್ರಿ ದೆಹಲಿಯ (Delhi) ಮಕ್ಕಳ ಆಸ್ಪತ್ರೆಯಲ್ಲಿ (Children’s Hospital) ಈ ದುರ್ಘಟನೆ ಸಂಭವಿಸಿದೆ. ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿನ ಬೇಬಿ ಕೇರ್ ಸೆಂಟರ್‌ನಲ್ಲಿ ರಾತ್ರಿ 11:32ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ 16 ಅಗ್ನಿ ಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿವೆ.
ಈ ವೇಳೆ ಕನಿಷ್ಠ 6 ನವಜಾತ ಶಿಶು ಸಜೀವವಾಗಿ ದಹನವಾಗಿದ್ದು, 12 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 6 ಜನ ರೋಗಿಗಳು ಸಾವನ್ನಪ್ಪಿದ್ದಾರೆ. ಆದರೂ ನಿಖರ ಅಂಕಿ- ಸಂಖ್ಯೆ ತಿಳಿದು ಬಂದಿಲ್ಲ.
ಆಸ್ಪತ್ರೆಯೊಳಗೆ ಇಡಲಾಗಿದ್ದ ಹಲವಾರು ಆಮ್ಲಜನಕ ಸಿಲಿಂಡರ್‌ಗಳೂ ಬೆಂಕಿಗೆ ಆಹುತಿಯಾಗಿವೆ. ಒಂದು ಆಸ್ಪತ್ರೆ ಕಟ್ಟಡ ಮತ್ತು ಎರಡು ಮಹಡಿಗಳು ವಸತಿ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಈ ಕುರಿತು ಪೊಲೀಸರು ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.