ಕೋವಿಡ್ ಆತಂಕ – ಗಣರಾಜ್ಯೋತ್ಸದ ಪರೇಡ್ ಗೆ ವೀಕ್ಷಕರ ಸಂಖ್ಯೆ ಕಡಿತ…
ಗಣರಾಜ್ಯೋತ್ಸವದ ಪ್ರಯುಕ್ತ ಸರ್ಕಾರ ನಡೆಸಿಕೊಡುವ ಪರೇಡ್‌ನಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಕಡಿತಗೊಳಿಸಲಾಗಿದೆ. ಕೋವಿಡ್ ಸಂಬಂಧಿತ ನಿರ್ಬಂಧಗಳ ಕಾರಣದಿಂದಾಗಿ ವೀಕ್ಷಕರ ಸಂಖ್ಯೆಯನ್ನು ಬೃಹತ್ ಪ್ರಮಾಣದಲ್ಲಿ ಮೊಟಕುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕತೆಯ ಅದ್ಭುತ ಪ್ರದರ್ಶನವನ್ನು ವೀಕ್ಷಿಸಲು ಕೇವಲ 5,000 ರಿಂದ 8,000 ಜನರಿಗೆ ಮಾತ್ರ ರಾಜಪಥಕ್ಕೆ ಪ್ರವೇಶವನ್ನು ಅನುಮತಿಸಲಾಗಿದೆ. ಎಂದು ಉನ್ನತ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಮೂರನೇ ಕೋವಿಡ್ -19 ಅಲೆಯ ಮಧ್ಯೆ ಪರೇಡ್ ಸೂಪರ್‌ಸ್ಪ್ರೆಡರ್ ಈವೆಂಟ್ ಆಗುವುದನ್ನು ನಾವು ಬಯಸುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಎರಡು ಬಾರಿ ಲಸಿಕೆ ಹಾಕಿದ ವಯಸ್ಕರು 1 ಬಾರಿ ಲಸಿಕೆ ಹಾಕಿಸಿಕೊಂಡ 15 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕರೊನಾ ಸಾಂಕ್ರಾಮಿಕಕ್ಕೂ ಮೊದಲು 1,25,000 ಜನ ರಾಜ್ ಪಥ್ ನಲ್ಲಿ ಪರೇಡ್ ನೋಡಲು ಸೇರುತ್ತಿದ್ದರು.








