ಬಳ್ಳಾರಿ: ಸೇವೆ ಖಾಯಂ ಹಾಗೂ ವೇತನ ತಾರತಮ್ಮ ನಿವಾರಣೆಗೆ ಆಗ್ರಹಿಸಿ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ 2 ಸಾವಿರ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಕೇವಲ ಎಂಬಿಬಿಎಸ್ ಮಾಡಿದ 500 ಗುತ್ತಿಗೆ ವೈದ್ಯರ ಸೇವೆ ಖಾಯಂ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬೆನ್ನಲ್ಲೇ ತಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಆಯುಷ್ ವೈದ್ಯರು ಸರ್ಕಾರವನ್ನು ಆಗ್ರಹಿಸಿದ್ದರು.
ಈ ಸಂಬಂಧ ಸರ್ಕಾರಕ್ಕೆ ಇಂದಿಗೆ(ಜುಲೈ 15)ವರೆಗೆ ಗಡುವು ನೀಡಿದ್ದರು. ಈ ಗಡುವಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಈ ವಿಷಯ ತಿಳಿಸಿದ ಆಯುಷ್ ಫೆಡರೇಶನ್ ಆಫ್ ಕರ್ನಾಟಕ ಸಂಘಟನೆಯ ಖಜಾಂಚಿ ಡಾ.ಅನಂದ್ ಕಿರಿಶಾಳ್, ಸರ್ಕಾರ ನಮ್ಮ ಬೇಡಿಕೆಗಳಿಗೆ ಮಣಿಯದ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಜಮೀರ್ ಪಾಕಿಸ್ತಾನಿ ಸಚಿವ’ ಸಿದ್ದಲಿಂಗ ಸ್ವಾಮೀಜಿ ಕಿಡಿ – ವಿವಾದಕ್ಕೆ ದಾರಿಯಾದ ಹೇಳಿಕೆ
ಕಲಬುರಗಿಯಲ್ಲಿ ನಡೆದ ವಕ್ಸ್ ಹಠಾವೋ (ವಕ್ಸ್ಗಳ ವಿರುದ್ಧ ಹೋರಾಟ) ಪ್ರತಿಭಟನೆಯ ವೇಳೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ಪ್ರಚಲಿತ ರಾಜಕೀಯ ವಿಷಯಗಳ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದು,...