ಉಡುಪಿ: ಕೊರೊನಾ ಸಂಕಷ್ಟದಿಂದಾಗಿ ದೇವಾಲಯಗಳನ್ನೂ ಒಳಗೊಂಡಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಆದಾಯ ತೀರ ಕ್ಷೀಣಿಸಿದೆ. ಅದರಲ್ಲಿ ಶ್ರೀಕೃಷ್ಣ ಮಠವೂ ಸಹ ಸೇರಿದೆ. ಶ್ರೀಕೃಷ್ಣ ಮಠದಲ್ಲಿ ಸುಮಾರು 300 ಜನರು ಸಿಬಂದಿ ಇದ್ದು, ಸುಮಾರು 150 ಜನರು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಇತ್ತ ಗೋಶಾಲೆ ಇತ್ಯಾದಿ ಖರ್ಚು ನಿರ್ವಹಣೆ ಆಗಬೇಕಾಗಿದೆ. ಹೀಗಾಗಿಯೇ ಶ್ರೀಕೃಷ್ಣ ಮಠ ನಿರ್ವಹಣೆಗಾಗಿ 1 ಕೋ.ರೂ. ಸಾಲಕ್ಕೆ ಬ್ಯಾಂಕ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರತಿನಿತ್ಯ ಸುಮಾರು 1ರಿಂದ 1.25 ಲ.ರೂ.ನಂತೆ ತಿಂಗಳಿಗೆ ಸುಮಾರು 30-40 ಲ.ರೂ. ಖರ್ಚಾಗುತ್ತಿದೆ. ಇತ್ತ ಬರೋಬ್ಬರಿ 5 ತಿಂಗಳು ದೇವಾಲಯಕ್ಕೆ ಭಕ್ತರ ಪ್ರವೆಶಕ್ಕೆ ನಿರ್ಬಂಧ ಹೇರಲಾಗಿದ್ದ ಪರಿಣಾಮ ಆದಾಯ ನಿಂತುಹೋಗಿದೆ. ಈ ಅವಧಿಯಲ್ಲಿ ಕಡಿಮೆ ಅಂದರೂ 1.5 ಕೋ.ರೂ. ಖರ್ಚು ಬಂದಿದೆ. ಇನ್ನೂ ದೇವಾಲಯ ನಿರ್ವಹಣೆಗಾಗಿ ಈಗಾಗಲೇ ಅದಮಾರು ಮಠದಿಂದ 60 ಲ.ರೂ. ಪಡೆದುಕೊಳ್ಳಲಾಗಿದ್ದು, ಇದನ್ನು ಸಾಧ್ಯವಾದರೆ ಮಾತ್ರ ಹಿಂದಿರುಗಿಸಬಹುದು ಎಂದು ವಿನಾಯಿತಿ ನಿಡಲಾಗಿದೆ.
ಹೀಗಾಗಿ ಮಠದ ನಿರ್ವಹಣೆಗಾಗಿ ಎರಡು ಬ್ಯಾಂಕ್‌ಗಳಿಂದ 1 ಕೋ.ರೂ. ಸಾಲ ಕೇಳಿದ್ದು, ಈಗಾಗಲೇ 15 ಲ.ರೂಪಾಯಿ ಬ್ಯಾಂಕ್ ನಿಂದ ಸಿಕ್ಕಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಮೂಲದಿಂದ ತಿಳಿದುಬಂದಿದೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.