ಸುಪ್ರಸಿದ್ಧ ವೈಷ್ಣೋ ದೇವಿ ಮಾತಾ ಯಾತ್ರೆ ಇದೇ ತಿಂಗಳು ಅಂದರೆ ಆ16 ರಿಂದ ಆರಂಭವಾಗಲಿದೆ. ನಾಳೆಯಿಂದ ಆರಂಭವಾಗಲಿರುವ ಯಾತ್ರೆ ಅತ್ಯಂತ ಕಟ್ಟುನಿಟ್ಟಿನ ನಿಯಗಳನ್ನು ದೇವಾಲಯದ ಮಂಡಳಿಯಿಂದ ಅಳವಡಿಸಲಾಗಿದೆ. ಒಂದು ದಿನಕ್ಕೆ 2 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಎರಡು ಸಾವಿರ ಯಾತ್ರಾರ್ಥಿಗಳ ಪೈಕಿ ಜಮ್ಮು-ಕಾಶ್ಮೀರರೇತರ 100 ಮಂದಿಗೆ ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಕೊರೊನಾ ಹಾವಳಿ ಹಿನ್ನೆಲೆ ಮಾರ್ಚ್ 18ರಂದು ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ಸುಮಾರು 5 ತಿಂಗಳ ನಂತರ ಆಗಸ್ಟ್ 16ರಿಂದ ಯಾತ್ರೆ ಪುನರಾರಂಭವಾಗುತ್ತಿದೆ. ವೈಷ್ಣೋದೇವಿ ಯಾತ್ರೆಯ ವೇಳೆ ಯಾತ್ರಾರ್ಥಿಗಳು ಹಲವು ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದ್ದು, ಸರ್ಕಾರ ಈ ಕುರಿತಾದ ಮಾರ್ಗಸೂಚಿಯನ್ನು ಈ ಹಿಂದದೆಯೇ ರಿಲೀಸ್ ಮಾಡಿತ್ತು. ಇದರ ಅನ್ವಯ ಎಲ್ಲಾ ಯಾತ್ರಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹತ್ತು ವರ್ಷದೊಳಗಿನ ಮಕ್ಕಳಿಗೆ ಯಾತ್ರೆಯಲ್ಲಿ ಭಾಗವಹಿಸುವಂತಿಲ್ಲ. ಹಾಗೆಯೇ ಮಾತಾ ಭವನದಲ್ಲಿ ಭಕ್ತರು ಉಳಿದುಕೊಳ್ಳುವುದನ್ನು ಸಹ ಈ ಬಾರಿ ನಿಷೇಧಿಸಲಾಗಿದೆ.








