mi vs pbks | ಪುಣೆಯಲ್ಲಿ ಮುಂಬೈಗೆ ಪಂಜಾಬ್ ಸವಾಲು..!!!

1 min read

ಪುಣೆಯಲ್ಲಿ ಮುಂಬೈಗೆ ಪಂಜಾಬ್ ಸವಾಲು..!!!

 ಇಂಡಿಯನ್ ಪ್ರಿಮಿಯರ್ ಲೀಗ್ ನ ಇವತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ತಂಡಗಳು ಗೆಲುವಿಗಾಗಿ ಕಾದಾಡಲಿವೆ.

ಸರಣಿ ಸೋಲುಗಳ ಮೂಲಕ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ವಿರುದ್ಧದ ಗೆದ್ದು, ಗೆಲುವಿನ ಟ್ರ್ಯಾಕ್ ಗೆ ಮರಳಲು ಪ್ಲಾನ್ ಮಾಡಿಕೊಂಡಿದೆ.

ಇತ್ತ ಎರಡು ಗೆಲುವು ಎರಡು ಸೋಲು ಕಂಡಿರುವ ಪಂಜಾಬ್ ಕಿಂಗ್ಸ್ ತಂಡ ಅಂಕ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸಿವೆ.  

ಸ್ಟ್ರೆಂಥ್ ಅಂಡ್ ವೀಕ್ನೆಸ್  

ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಮಕಾಢೆ ಮಲಗಿದೆ. ಘಟಾನುಘಟಿ ಆಟಗಾರರನೇ ತಂಡದಲ್ಲಿದ್ದೂ ಗೆಲುವು ಮಾತ್ರ ಮರೀಚಿಕೆಯಾಗಿದೆ.

ರೋಹಿತ್ ಶರ್ಮಾ, ಇಶಾನ್ ಕಿಶಾನ್, ಸೂರ್ಯ ಕುಮಾರ್ ಯಾದವ್, ಕೀರಾನ್ ಪೋಲಾರ್ಡ್, ಬೂಮ್ರಾ ರಂತಹ ಆಟಗಾರರು ತಂಡದಲ್ಲಿದ್ದರೂ ನಿರೀಕ್ಷಿತ ಪ್ರದರ್ಶನ ಹೊರ ಬರುತ್ತಿಲ್ಲ.  ಸಾಂಘೀಕ ಪ್ರದರ್ಶನ ಮತ್ತು ಬೌಲಿಂಗ್ ವಿಭಾಗ ವೈಫಲ್ಯ ಮುಂಬೈಗೆ ತಲೆನೋವಾಗಿದೆ.

 ಪಂಜಾಬ್  

ಪಂಜಾಬ್ ತಂಡ ಮೇಲ್ನೋಟಕ್ಕೆ ಸಾಲಿಡ್ ಆಗಿದೆ. ಆದ್ರೆ ಕೆಲವೊಂದು ಎಡವಟ್ಟುಗಳಿಂದ ಪಂದ್ಯವನ್ನು ಸೋಲುತ್ತಿದೆ. ಮುಖ್ಯವಾಗಿ ಮಯಾಂಕ್ ಬ್ಯಾಟ್ ಸದ್ದು ಮಾಡುತ್ತಿರೋದು ತಂಡದ  ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇನ್ನುಳಿದಂತೆ ಧವನ್, ಜಾನಿ ಬೇರ್ ಸ್ಟೋವ್, ಲಿವಿಂಗ್ ಸ್ಟೋನ್, ಕಗಿಸೋ ರಬಾಡ ತಂಡದ ಪ್ರಮುಖ ಆಟಗಾರರಾಗಿದ್ದಾರೆ. 

ಪುಣೆ ಪಿಚ್:

ಪುಣೆ ಪಿಚ್ ಸ್ಪೋರ್ಟಿಂಗ್ ನೇಚರ್ ಹೊಂದಿದೆ.  ಬ್ಯಾಟ್ಸ್ಮನ್ಗಳ ಜೊತೆ ಬೌಲರ್ಗಳಿಗೂ ನೆರವು ನೀಡುತ್ತದೆ. ಆದರೆ ಡ್ಯೂ ಫ್ಯಾಕ್ಟರ್ ಇರುವುದರಿಂದ ಟಾಸ್ ಮೇಲ ಹೆಚ್ಚು ಗಮನ ಇಡುವುದು ಅನಿವಾರ್ಯ. Match Preview – Mumbai vs Punjab Kings

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd