ಆತನಿಂದ ಪಾಕಿಸ್ತಾನ ತಂಡಕ್ಕೆ ಅಪಾಯ : ಹೇಡನ್
ದುಬೈ : ಐಸಿಸಿ ಟಿ-20 ವಿಶ್ವಕಪ್ ಕದನ ರಣಾಂಗಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸದ್ಯ ನಡೆಯುತ್ತಿರುವ ವಾರ್ಮ್ ಅಪ್ ಪಂದ್ಯಗಳು ಹಾಗೂ ಅರ್ಹತಾ ಪಂದ್ಯಗಳಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳು ಬಂದಿವೆ.
ಆದ್ರೆ ಅಸಲಿ ಆಟ ಶುರುವಾಗೋದು ಮಾತ್ರ ಅಕ್ಟೋಬರ್ 24ರಂದು. ಹೌದು..! ಅಕ್ಟೋಬರ್ 24 ರಂದು ನಡೆಯಲಿರುವ ಇಂಡೋ-ಪಾಕ್ ಕದನವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದಿದೆ. ಎಲ್ಲೆಲ್ಲೂ ಭಾರತ – ಪಾಕಿಸ್ತಾನ ಪಂದ್ಯದ ಬಗ್ಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ರಣರೋಚಕ ಕಾಳಗದಲ್ಲಿ ಗೆಲ್ಲೋರು ಯಾರು..? ಪಂದ್ಯದಲ್ಲಿ ಯಾರು ಮೇಲು ಗೈ ಸಾಧಿಸುತ್ತಾರೆ..? ಯಾವ ಆಟಗಾರ ಮಿಂಚುತ್ತಾರೆ. ಯಾರಿಗೆ ಯಾರು ಸವಾಲೊಡ್ಡಳಿದ್ದಾರೆ..? ಎಂಬುದರ ಬಗ್ಗೆ ಎಲ್ಲರು ಮಾತನಾಡುತ್ತಿದ್ದಾರೆ.
ಈ ನಡುವೆ ಪಾಕಿಸ್ತಾನ ತಂಡದ ಸಲಹೆಗಾರ ಹಾಗೂ ಆಸೀಸ್ ನ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಈ ಪಂದ್ಯದ ಕುರಿತು ಮಾತನಾಡಿದ್ದಾರೆ. ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಪಾಕಿಸ್ತಾನಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದರಲ್ಲೂ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನ ಮೆಚ್ಚಿಕೊಂಡಿರುವ ಹೇಡನ್, ರಾಹುಲ್ ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಟಿ-20 ಕ್ರಿಕೆಟ್‍ನಲ್ಲಿ ಅವರ ಪ್ರಾಬಲ್ಯ ದೊಡ್ಡದಿದೆ. ನಗುಮೊಗದ ರಿಷಭ್ ಪಂತ್ ಸಹ ಸವಾಲನ್ನು ಒಡ್ಡಬಹುದು ಎಂದಿದ್ದಾರೆ.