UP Election 2022 : BSP ಅಭ್ಯರ್ಥಿಗಳ ಪಟ್ಟಿ ರಿಲೀಸ್ – ಯೋಗಿ ವಿರುದ್ಧ ಕಣಕ್ಕಿಳಿಯುವವರು ಯಾರು..???
ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಎಸ್‌ಪಿ ಶನಿವಾರ 54 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.. ಇನ್ನೂ ಗೋರಖ್‌ಪುರ ನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಬಿಎಸ್ ಪಿಯ ಖ್ವಾಜಾ ಸಂಶುದ್ದೀನ್ ಅವರನ್ನು ಕಣಕ್ಕಿಳಿಸಲಾಗಿದೆ.
ತನ್ನ ಇತ್ತೀಚಿನ ಪಟ್ಟಿಯಲ್ಲಿ, ಮಾಯಾವತಿ ನೇತೃತ್ವದ ಪಕ್ಷವು ಏಳು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಸಂತೋಷ್ ತಿವಾರಿ ಅವರನ್ನು ಕುಶಿನಗರ ಜಿಲ್ಲೆಯ ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ತಿವಾರಿ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಬಿಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಕಣಕ್ಕೆ ಇಳಿದಿದ್ದಾರೆ..
UP Election 2022 : ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಾಗಾ , ಪ್ರಿಯಾಂಕಾ ಗಾಂಧಿ
ಬಿಎಸ್‌ಪಿ ಕತೇಹಾರಿಯ ಟೀಕೆಟ್ ಅನ್ನು ಪ್ರತೀಕ್ ಪಾಂಡೆ ಅವರಿಗೆ ಮತ್ತು ಅಕ್ಬರ್ ಪುರದ ಟಿಕೆಟ್ ಅನ್ನು ಚಂದ್ರಪ್ರಕಾಶ್ ವರ್ಮಾ ಅವರಿಗೆ ನೀಡಿದೆ. ಎರಡೂ ಕ್ಷೇತ್ರಗಳು ಅಂಬೇಡ್ಕರ್ ನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ.
2017 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಬಿಎಸ್ಪಿಯ ಲಾಲ್ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್ಭರ್ ಕ್ರಮವಾಗಿ ಕತೇಹಾರಿ ಮತ್ತು ಅಕ್ಬರ್ಪುರದಿಂದ ಗೆದ್ದಿದ್ದರು.
ಬಿಎಸ್‌ಪಿ ತನ್ನ ಹಾಲಿ ಶಾಸಕ ಉಮಾಶಂಕರ್ ಸಿಂಗ್ ಅವರನ್ನು ಬಲ್ಲಿಯಾದಲ್ಲಿ ರಾಸ್ರಾದಿಂದ ಕಣಕ್ಕಿಳಿಸಿದೆ. ಗೋರಖ್‌ಪುರದ ಚಿಲ್ಲುಪರ್‌ನಿಂದ ರಾಜೇಂದ್ರ ಸಿಂಗ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಕಣಕ್ಕೆ ಇಳಿಸಿದೆ. ವಿನಯ್ ಶಂಕರ್ ತಿವಾರಿ ಅವರು ಪಕ್ಷವನ್ನು ತೊರೆದು ಎಸ್‌ಪಿಗೆ ಸೇರ್ಪಡೆಗೊಂಡಿದ್ದರು. ಅಂಬೇಡ್ಕರ್‌ನಗರ, ಬಲರಾಂಪುರ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳನ್ನು ಒಳಗೊಂಡಿರುವ 54 ವಿಧಾನಸಭಾ ಕ್ಷೇತ್ರಗಳಿಗೆ ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಮುಂಬೈನಲ್ಲಿ 3% ವಿಚ್ಛೇದನಗಳು ಟ್ರಾಫಿಕ್ ಜಾಮ್‌ನಿಂದ ಸಂಭವಿಸುತ್ತವೆ – ಅಮೃತಾ ಫಡ್ನಾವಿಸ್..
ಮಾರ್ಚ್ 3 ರಂದು ರಾಜ್ಯ ವಿಧಾನಸಭಾ ಚುನಾವಣೆಯ ಆರನೇ ಹಂತದಲ್ಲಿ ಈ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು. 403 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷವು ಶೇ 39.67 ರಷ್ಟು ಮತಗಳನ್ನು ಗಳಿಸಿತ್ತು. ಸಮಾಜವಾದಿ ಪಕ್ಷ (ಎಸ್‌ಪಿ) 47 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಎಸ್‌ಪಿ 19 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು..









