ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

UP Assembly Election 2022: ಕುಲಗಳ ಕುರುಕ್ಷೇತ್ರದಲ್ಲಿ ಪಾರ್ಟಿಗಳ ಪ್ಲಾನಿಂಗ್

Mahesh M Dhandu by Mahesh M Dhandu
January 29, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

UP Assembly Election 2022: ಕುಲಗಳ ಕುರುಕ್ಷೇತ್ರದಲ್ಲಿ ಪಾರ್ಟಿಗಳ ಪ್ಲಾನಿಂಗ್

ಐದು ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನಗಳು ಅಷ್ಟು ಸುಲಭವಾಗಿ ಯಶಸ್ವಿಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನುತ್ತಿದೆ ಗ್ರೌಂಡ್ ರಿಪೋರ್ಟ್. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಈ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದರ ಜೊತೆಗೆ, ಇತ್ತೀಚಿನ ರೈತ ಚಳವಳಿಗಳ ಕೇಂದ್ರಬಿಂದುವಾಗಿರುವ ಪಶ್ಚಿಮ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳ ಚುನಾವಣಾ ಮೈತ್ರಿಗಳು ಮತ್ತು ರಾಜಕೀಯ ಪಕ್ಷಗಳ ತಂತ್ರಗಳು ಬಿಜೆಪಿ ಕಣ್ಣಿಗೆ ನಿದ್ದೆ ಬಾರದಂತೆ ಮಾಡಿದೆ.  ಜಾತಿಗಳ ಒಗ್ಗೂಡಿಸುವಿಕೆಯೊಂದಿಗೆ ಕಳೆದ ಚುನಾವಣೆಯ ವೈಭವವನ್ನು ಉಳಿಸಿಕೊಳ್ಳುವ  ಬಿಜೆಪಿ ಆಶಯವನ್ನು ವಿಫಲಗೊಳಿಸಬೇಕೆಂದು ಸಮಾಜವಾದಿ ಪಕ್ಷವು ಪ್ರಯತ್ನಿಸುತ್ತಿದೆ. ಜಾಟರು, ಮುಸ್ಲಿಮರು ಮತ್ತು ರೈತರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಜಾತಿ, ಸಮುದಾಯದ ಮತಗಳನ್ನು ಕಸಿದುಕೊಳ್ಳಲು ಎಸ್ ಪಿ ಸರ್ವ ಪ್ರಯತ್ನ ಮಾಡುತ್ತಿದೆ. ಆರ್‌ಎಲ್‌ಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜಾಟ್‌ ರನ್ನು ಸಮಾಧಾನಪಡಿಸುವಲ್ಲಿ ಎಸ್‌ಪಿ ಈಗಾಗಲೇ ಯಶಸ್ವಿಯಾಗಿದೆ. ಇತ್ತ ಜಾಟ್‌ ಗಳನ್ನು ವಿಭಜಿಸಿ  ಮೈತ್ರಿ ತಂತ್ರಗಳನ್ನು ವಿಫಲಗೊಳಿಸುವ ಯೋಜನೆಗಳೊಂದಿಗೆ ಬಿಜೆಪಿ ಅಸ್ತ್ರಗಳನ್ನು ಹೂಡುತ್ತಿದೆ.

Related posts

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

June 25, 2026
ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

June 25, 2026

ಮುಸ್ಲಿಂ- ಜಾಟರ ಸಂಬಂಧ.. ಹೇಗಿದೆ..

up-assembly-election-2022-BJP SP BSP planing saaksha tv

ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅವರ ಅಜ್ಜ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ‘ಕಿಸಾನ್ ನಾಯಕರೆಂದು ಗುರುತಿಸಿಕೊಂಡವರು. ಅವರ ಕಾಲದಲ್ಲಿ ಮುಸ್ಲಿಮರು ಮತ್ತು ಜಾಟ್ ರು ಒಟ್ಟಾಗಿದ್ದರು.  ಎಸ್‌ಪಿ-ಬಿಎಸ್‌ಪಿ ಹುಟ್ಟುವುದಕ್ಕೂ ಮೊದಲು, ಪಶ್ಚಿಮ ಯುಪಿ ಮುಸ್ಲಿಮರು ಚರಣ್ ಸಿಂಗ್ ಅವರನ್ನು ಬೆಂಬಲಿಸಿದ್ದರು. ಇದನ್ನೇ  ಅಜಿತ್ ಸಿಂಗ್ ಕೂಡ ರಾಜಕೀಯದಲ್ಲಿ ಮುಂದುವರೆಸಿಕೊಂಡು ಬಂದರು. ಆದರೆ, 2013ರ ಮುಜಾಫರ್‌ನಗರ ಗಲಭೆಯಿಂದ ಜಾಟ್-ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆಯಾಯಿತು. ಗಲಭೆಯ ನಂತರ, ಎರಡು ಸಮುದಾಯಗಳ ನಡುವೆ ಬಿರುಕು ಮೂಡಿ ಮುಸ್ಲಿಮರು ಆರ್‌ಎಲ್‌ಡಿಯಿಂದ ಹಿಂದೆ ಸರಿದರು. ಇದರಿಂದಾಗಿ 2014 ಮತ್ತು 2019ರ ಚುನಾವಣೆಯಲ್ಲಿ ಆರ್‌ಎಲ್‌ಡಿ ಒಂದೇ ಒಂದು ಲೋಕಸಭಾ ಸ್ಥಾನವನ್ನು ಗೆಲ್ಲಲಿಲ್ಲ.

ಈ ಬಿರುಕಿಗೆ ಮೈತ್ರಿ ಮೂಲಕ ಮುಲಾಮು ಹಚ್ಚಲು ಮುಂದಾಗಿರುವ ಎಸ್‌ಪಿ, ಆರ್ ಎಲ್ ಡಿ ಗೆ 33 ಸ್ಥಾನಗಳನ್ನು ನೀಡದೆ.  ಇಲ್ಲಿ ಜಾಟ್-ಮುಸ್ಲಿಂ-ರೈತರು ಒಗ್ಗೂಡಿಸಿದರೆ ಕನಿಷ್ಠ 50 ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಎಸ್ ಪಿಯದ್ದಾಗಿದೆ. ಇನ್ನು 33 ಸ್ಥಾನಗಳ ಈ ಪೈಕಿ ಆರ್‌ಎಲ್‌ಡಿ 5 ಸ್ಥಾನಗಳನ್ನು ಮುಸ್ಲಿಮರಿಗೆ ನೀಡಿದೆ. ಸಮಾಜವಾದಿ ಪಾರ್ಟಿ ಎಂಟು ಸ್ಥಾನಗಳಲ್ಲಿ ಮುಸ್ಲಿಮರನ್ನು ಕಣಕ್ಕಿಳಿಸಿದೆ.

ಜಾಟರ ಒಲವು ಯಾರ ಕಡೆ..?

ಪಶ್ಚಿಮ ಯುಪಿಯಲ್ಲಿ ಪಕ್ಷಗಳ ಗೆಲುವಿನ ಪಾತ್ರ ನಿರ್ಣಾಯಕವಾಗಿದೆ. ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜಾಟ್‌ ರ ಬೆಂಬಲದೊಂದಿಗೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ರೈತ ಚಳವಳಿಯ ಹಿನ್ನೆಲೆಯಲ್ಲಿ ಜಾಟ್‌ ರು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಅದು ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಗೆ ಲಾಭವಾಗುವ ಸಾಧ್ಯತೆಗಳಿವೆ. ಇತ್ತ ಬಿಜೆಪಿ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬಂದ್ರೆ ಜಯಂತ್ ಸಿಂಗ್ ರಬ್ಬರ್ ಸ್ಟಾಂಪ್ ಆಗುತ್ತಾರೆ ಎಂದು ಪ್ರಚಾರ ಮಾಡುತ್ತಾ, ಚಾಟ್ ರ ಮತಗಳಿಸಲು ಮುಂದಾಗಿದೆ.

 ಎಸ್ ಪಿಗೆ ಬಿಎಸ್ ಪಿ ಟಕ್ಕರ್

up-assembly-election-2022-BJP SP BSP planing saaksha tv

ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಮುಜಾಫರ್‌ನಗರ ವಿಭಾಗದಲ್ಲಿ ಸಮಾಜವಾದಿ ಪಾರ್ಟಿ, ಒಬ್ಬನೇ ಒಬ್ಬ ಮುಸಲ್ಮಾನನನ್ನು ಕಣಕ್ಕಿಳಿಸಲಿಲ್ಲ. ಮುಸ್ಲಿಂ ಮತಗಳು ಹೇಗಿದ್ದೂ ನಮಗೆ ಬರುತ್ತವೆ ಎಂಬ ನಿರೀಕ್ಷೆಯೊಂದಿಗೆ ಹಿಂದೂ ಮತಗಳನ್ನು ಒಡೆಯಲು ಎಸ್ ಪಿ ಈ ಪ್ಲಾನ್ ಮಾಡಿಕೊಂಡಿದೆ. ಇದು  ಟಿಕೆಟ್ ನಿರೀಕ್ಷೆಯಲ್ಲಿದ್ದ ಮುಸ್ಲಿಂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಮಾಯಾವತಿ ಅವರು 17 ಮುಸ್ಲಿಮರನ್ನು ಅಖಾಡಕ್ಕೆ ಇಳಿಸಿದ್ದಾರೆ.

ಮುಸ್ಲಿಮರಿಗಿಲ್ಲ ಟಿಕೆಟ್..

ಪಶ್ಚಿಮ ಯುಪಿಯಲ್ಲಿ ಶೇ.26 ಮುಸ್ಲಿಮರಿದ್ದರೂ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಳೆದ ಚುನಾವಣೆಯಲ್ಲಿ ಇದೇ ತಂತ್ರವನ್ನು ಪ್ರಯೋಗಿಸಿದ್ದ ಬಿಜೆಪಿ 76 ಸ್ಥಾನಗಳಲ್ಲಿ 66 ಸ್ಥಾನಗಳನ್ನು ಗೆದ್ದಿತ್ತು. ಕೇವಲ ತನ್ನ ಹಿಂದುತ್ವದ ಶಕ್ತಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿ ಈಗ ಜಾಟ್‌ ರನ್ನು ಸೆಳೆಯಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜಾಟ್ ರಾಜ ರಾಜ ಮಹೇಂದ್ರ ಪ್ರತಾಪ್ ಸಿಂಗ್ ಅವರ ಸ್ಮರಣಾರ್ಥ ವಿಶ್ವವಿದ್ಯಾನಿಲಯಕ್ಕೆ ಅಡಿಪಾಯ ಹಾಕಿದ್ರು. ಆ ಮೂಲಕ ಜಾಟ್ ಮತಗಳ ಸೆಳೆಯಲು ಕೇಸರಿ ಪಡೆ ಪ್ಲಾನ್ ಮಾಡಿದೆ.

ಇದಲ್ಲದೆ ಪಶ್ಚಿಮ ದೆಹಲಿ ಸಂಸದ ಪರ್ವೇಜ್ ಸಿಂಗ್ ವರ್ಮಾ ಅವರ ಮನೆಯಲ್ಲಿ ಪಶ್ಚಿಮ ಯುಪಿಯ 200 ಜಾಟ್ ನಾಯಕರೊಂದಿಗೆ ನಡೆದ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಅವರು ಆರ್‌ಎಲ್‌ಡಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಚುನಾವಣೆಯ ನಂತರ ರಾಜಿ ಮಾಡಿಕೊಳ್ಳಲು ಸಿದ್ಧ ಎಂದಿದ್ದಾರಂತೆ.

ಇನ್ನು ಪ್ಲಾನ್-ಬಿ ಅಡಿಯಲ್ಲಿ, ಬಿಜೆಪಿ ಪಶ್ಚಿಮ ಯುಪಿಯಲ್ಲಿ ಪ್ರಬಲವಾಗಿರುವ ಶೈನಿ, ಪಾಲ್, ಕಶ್ಯಪ್‌ ಮತ್ತು ಪ್ರಜಾಪತಿಗಳ ಮತಗಳನ್ನು ಅಭಿವೃದ್ಧಿಯ ಮಂತ್ರದೊಂದಿಗೆ ತನ್ನತ್ತ  ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ.

Tags: #Saaksha TVBSPCongressSPupelection
ShareTweetSendShare
Join us on:

Related Posts

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

by Shwetha
June 25, 2026
0

ಬೆಂಗಳೂರು ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈಗ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ...

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

by Shwetha
June 25, 2026
0

ಅಮೆರಿಕ–ಇರಾನ್ ನಡುವಿನ ಶಾಂತಿ ಒಪ್ಪಂದದ ಬಳಿಕ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಕಂಡುಬಂದಿದ್ದರೂ, ಭಾರತೀಯ ರಾಯಭಾರಿ ಕಚೇರಿ ಭಾರತೀಯ ನಾಗರಿಕರಿಗೆ ಮಹತ್ವದ ಪ್ರಯಾಣ ಸಲಹೆ ನೀಡಿದೆ....

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

by Shwetha
June 25, 2026
0

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ; 2-3 ದಿನಗಳಲ್ಲಿ ಹೊಸ ಮಾರ್ಗಸೂಚಿ

by Shwetha
June 25, 2026
0

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಹೊಸ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದ್ದು,...

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

by Shwetha
June 25, 2026
0

ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್ ಶಿಪ್ ವಿವಾದ ಈಗ ತಾರಕಕ್ಕೇರಿದೆ. ರಾಜಕೀಯ ಕೆಸರೆರಚಾಟದ ನಡುವೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಎಂಟ್ರಿ ದೊಡ್ಡ ಸಂಚಲನ ಮೂಡಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram