ಜೈಪುರ: ರಾಜಸ್ಥಾನ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ವಿಶ್ವಾಸ ಮತಯಾಚನೆ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಹಾಕಿ ಎಂದು ಬಿಎಸ್ ಪಿ ಶಾಸಕರಿಗೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೂಚನೆ ನೀಡಿದ್ದಾರೆ.
ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ವಿಶ್ವಾಸಮತ ಯಾಚನೆ ಅಥವಾ ಇನ್ಯಾವುದೇ ನಡೆ ವಿರುದ್ಧ ಮತ ಚಲಾಯಿಸುವಂತೆ ಘಿನೇ ಅನುಸೂಚನೆಯ 2 (1) (ಎ) ಪ್ರಕಾರ ಬಿಎಸ್ ಪಿ ಯಿಂದ ಕಾಂಗ್ರೆಸ್ ಗೆ ಸೇರಿದ ಆರು ಮಂದಿ ಶಾಸಕರಿಗೆ ಮಾಯಾವತಿ ಸೂಚನೆ ನೀಡಿದ್ದಾರೆ. ಒಂದು ವೇಳೆ ಇದನ್ನು ಅನುಸರಿಸದೇ ಇದ್ದರೆ ಘಿನೇ ಅನುಸೂಚನೆಯ 2(1)(ಬಿ) ಪ್ರಕಾರ ಅನರ್ಹ ಮಾಡಲಾಗುವುದು ಎಂದು ಬಿಎಸ್‌ಪಿ ಎಚ್ಚರಿಕೆ ನೀಡಿದೆ.
ಸಂದೀಪ್ ಯಾದವ್, ವಾಜೀಬ್ ಅಲಿ, ದೀಪ್‌ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುದಾ 2018ರಲ್ಲಿ ಬಿಎಸ್‌ಪಿ ಅಭ್ಯರ್ಥಿಗಳಾಗಿ ಚುನಾವಣೆ ಸ್ಪರ್ಧಿಸಿ ಚುನಾವಣೆ ಗೆದ್ದಿದ್ದರು. ಆದಾಗ್ಯೂ 2019 ಸೆಪ್ಟೆಂಬರ್‌ನಲ್ಲಿ ಈ ಆರು ಶಾಸಕರು ಕಾಂಗ್ರೆಸ್ ಸೇರಿದ್ದರು.