ಉಕ್ರೇನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಚಂದನ್ ಜಿಂದಾಲ್ ಸಾವು
ಉಕ್ರೇನ್‌ನಲ್ಲಿ ಇಸ್ಕೆಮಿಯಾ ಪಾರ್ಶ್ವವಾಯುವಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬ್ರೈನ್ ಸ್ಟ್ರೋಕ್ ಗೆ ಚಿಕಿತ್ಸೆ ಪಡೆಯುತ್ತಿದ್ದರು.
ಪಂಜಾಬ್‌ನ ಬರ್ನಾಲಾ ಜಿಲ್ಲೆಯ ನಿವಾಸಿಯಾಗಿರು ವೈದ್ಯಕೀಯ ವಿದ್ಯಾರ್ಥಿ ಬುಧವಾರ ಯುದ್ಧ ಪೀಡಿತ ದೇಶದಲ್ಲಿ ಸಾವನ್ನಪ್ಪಿದ್ದಾರೆ, ಚಂದನ್ ಜಿಂದಾಲ್ ವಿನ್ನಿಟ್ಸಿಯಾ ನ್ಯಾಷನಲ್ ಪಿರೋಗೋವ್ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ಓದುತ್ತಿದ್ದರು.
ಚಂದನ್ ಅವರ ತಂದೆ ಶಿಶನ್ ತಮ್ಮ ಮಗನ ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬರ್ನಾಲಾ ಡಿಸಿ ಕುಮಾರ್ ಸೌರಭ್ ರಾಜ್, “ನಾವು ವಿದ್ಯಾರ್ಥಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತದೇಹ ಭಾರತಕ್ಕೆ ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಚಂದನ್ ಜಿಂದಾಲ್ ನಾಲ್ಕು ವರ್ಷಗಳ ಹಿಂದೆ, ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್‌ಗೆ ತಲುಪಿದ್ದರು. “ಫೆಬ್ರವರಿ 2 ರಂದು, ಅವರು ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದರು, ಫೆಬ್ರವರಿ 3 ರಂದು ಕುಟುಂಬಕ್ಕೆ ಇದರ ಬಗ್ಗೆ ಮಾಹಿತಿ ಬಂದಿತ್ತು. ಚಂದನ್ ಅವರ ತಂದೆ ಉಕ್ರೇನ್ ಗೆ ಹೋಗಿದ್ದರಾದರೂ . ವಿದ್ಯಾರ್ಥಿ ವೆಂಟಿಲೇಟರ್ನಲ್ಲಿದ್ದ ಕಾರಣ ಕರೆತರಲು ಸಾಧ್ಯವಾಗಿರಲಿಲ್ಲ..