ಗದಗ: ದಿಢೀರ್ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೈಲಾರಲಿಂಗೇಶ್ವರದಲ್ಲಿ ಹರಕೆ ಸಲ್ಲಿಸಿದ ಬಳಿಕ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದ ದಿಂಗಾಲೇಶ್ವರ ಮಠಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್ ಹಲವು ಹೊತ್ತು ಮಾತುಕತೆ ನಡೆಸಿದರು.
ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಮಠಕ್ಕೆ ಡಿ.ಕೆ ಶಿವಕುಮಾರ್ ಬಂದಿಲ್ಲ. ವೈಯಕ್ತಿಕ, ಸಾಮಾಜಿಕವಾಗಿ, ಧಾರ್ಮಿಕವಾಗಿ ಚರ್ಚೆ ಮಾಡಲು ಬಂದಿದ್ದಾರೆ. ಮನೆತನ, ವಯಕ್ತಿಕ ಮಾತನಾಡಲು ಬಂದಾಗ ಹೇಗೆ ಹೇಳಲು ಆಗುತ್ತಾ. ಡಿಕೆಶಿ ಭೇಟಿ ಸೌಜನ್ಯದ ಬೇಟಿಯಾಗಿತ್ತು ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಮಠಗಳ ಜೊತೆ ಡಿ.ಕೆ ಶಿವಕುಮಾರ್ ಅನೋನ್ಯ ಸಂಬಂಧ ಇಟ್ಟುಕೊಂಡಿದ್ದಾರೆ. ಅವರು ಎಲ್ಲರ ಜೊತೆ ಐಕ್ಯತೆ ಭಾವದಿಂದ ಹೋಗುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಷ್ಟೇ ಹೇಳಿಕೆ ಡಿಕೆಶಿ ಜತೆ ನಡೆದ ಮಾತುಕತೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು ಅದರಿಂದ ದುಷ್ಪರಿಣಾಮ ಆಗುತ್ತದೆ. ಯಾವುದೇ ಪಕ್ಷಕ್ಕಾಗಲಿ, ನಾಯಕತ್ವಕ್ಕಾಗಲೀ ಧಕ್ಕೆಯಾಗುತ್ತೆ ಅನ್ನೋ ಚರ್ಚೆ ಆಗಿದೆ. ಧರ್ಮದ ವಿಚಾರದಲ್ಲಿ ರಾಜಕಾರಣ ಹಸ್ತಕ್ಷೇಪ ಮಾಡಬಾರದು ಅನ್ನೋ ಚರ್ಚೆ ನಡೆದಿದೆ ಎಂದು ಸ್ವಾಮೀಜಿ, ವೀರಶೈವ ಲಿಂಗಾಯತ ವಿವಾದ ಇನ್ನೂ ಮುಗಿದಿಲ್ಲ. ಆದ್ರೂ ಈ ಬಗ್ಗೆ ಚರ್ಚೆ ಆಗಿಲ್ಲ. ಡಿಕೆಶಿ ಬಹಿರಂಗ ಸಭೆಯಲ್ಲಿ ಕ್ಷಮೆ ಹೇಳಿಕೊಂಡಿದ್ದಾರೆ. ಇದು ಮುಗಿದ ಅಧ್ಯಾಯ. ಮಠ ಮಾನ್ಯಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ರಾಜಕೀಯ ನಾಯಕರು ಭೇಟಿ ನೀಡ್ತಾರೆ. ಇದೊಂದು ಸೌಜನ್ಯದ ಭೇಟಿ. ಯಾವುದೇ ಧರ್ಮದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಕೈ ಹಾಕುವ ಕೆಲಸ ಬೇಡ ಎಂದಿದ್ದಕ್ಕೆ ಸತ್ಯ ಎಂದು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ರಾಜಕೀಯದಲ್ಲೂ ಮಠಾಧೀಶರು ಎಂದೂ ಭಾಗಿಯಾಗಲು ಮನಸ್ಸು ಮಾಡಲ್ಲ. ಆದ್ರೆ ಯಾವಾಗ ರಾಜಕೀಯ ಪಕ್ಷಗಳು ಧರ್ಮದಲ್ಲಿ ಭಾಗಿಯಾಗ್ತಾವೆ. ಆವಾಗ ಅನಿವಾರ್ಯವಾಗಿ ಮಠಾಧೀಶರು ಸೂಚನೆ ಕೊಡಬೇಕಾಗುತ್ತೆ ಕೊಡ್ತೀವಿ ಅಷ್ಟೇ. ಹುಬ್ಬಳ್ಳಿ ಮೂರುಸಾವಿರ ಮಠದ ಪೀಠಾಧಿಪತಿ ವಿಚಾರದವಾಗಿ ಮಠಕ್ಕೆ ಕೊರೊನಾ ಅಡ್ಡ ಬಂದೈತಿ.. ಮತ್ಯಾರೂ ಅಡ್ಡ ಬಂದಿಲ್ಲ. ಆ ಕೊರೊನಾ ಯಾವಾಗ ಹೋಗುತ್ತೋ ಆವಾಗ ಮೂರುಸಾವಿರ ಮಠದ ಸಮಸ್ಯೆ ಬಗೆಹರಿಯುತ್ತೆ ಎಂದು ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel