ಕರೋನಾ ಸಭೆಯಲ್ಲಿ ಪ್ರತಿಪಕ್ಷಗಳೆ ಟಾರ್ಗೆಟ್ – ಪೆಟ್ರೋಲ್ ತೆರಿಗೆ ಕಡಿಮೆ ಮಾಡುವಂತೆ ಮೋದಿ ಒತ್ತಾಯ
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು. ಸಭೆಯಲ್ಲಿ ಕರೋನಾ ಸಾಂಕ್ರಾಮಿಕತೆ ಮತ್ತು ಉಕ್ರೇನ್-ರಷ್ಯಾ ಯುದ್ಧದಿಂದ ದೇಶದ ಆರ್ಥಿಕ ಸ್ಥಿತಿಯ ಮೇಲಿನ ಪರಿಣಾಮದ ಬಗ್ಗೆಯೂ ಚರ್ಚೆ ನಡೆಯಿತು. ಸಾರ್ವಜನಿಕರ ಮೇಲೆ ಹಣದುಬ್ಬರದ ಹೊರೆ ಕಡಿಮೆ ಮಾಡಲು ರಾಜ್ಯಗಳು ತಮ್ಮ ತೆರಿಗೆಯ ಪಾಲನ್ನು ಕಡಿಮೆ ಮಾಡುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಮಾತನಾಡಿದರು. ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿನ ವ್ಯತ್ಯಾಸವನ್ನ ಹೋಲಿಸಿದರು. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 120 ರೂ ಆಗಿದ್ದರೆ, ನೆರೆಯ ಕೇಂದ್ರಾಡಳಿತ ಪ್ರದೇಶವಾದ ದಮನ್ ದಿಯುನಲ್ಲಿ 102 ರೂ. ಅದೇ ರೀತಿ ತಮಿಳುನಾಡಿನಲ್ಲಿ 111 ರೂ., ಜೈಪುರದಲ್ಲಿ 118 ರೂ. ಇದೆ.
ಇದಕ್ಕೂ ಮೊದಲು ಮಾತನಾಡಿ “ನಾನು ಎಲ್ಲಾ ಕೊರೊನಾ ವಾರಿಯರ್ಸ್ ರನ್ನ ಮೆಚ್ಚುತ್ತೇನೆ. ಅವರು ಇಲ್ಲಿಯವರೆಗೆ ತಮ್ಮ ಕೆಲಸವನ್ನು ಮಾಡಿದ್ದಾರೆ. ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಕೊರೊನಾ ಸವಾಲು ಮುಗಿದಿಲ್ಲ. ಅನೇಕ ದೇಶಗಳಲ್ಲಿ ಪ್ರಕರಣಗಳು ವರದಿಯಾಗಿವೆ. ನಾವು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದೇವೆ ಎಂದರು.
ಕಳೆದ ಎರಡು ವಾರಗಳಲ್ಲಿ ಪ್ರಕರಣಗಳು ಹೆಚ್ಚಾಗಿರುವುದರಿಂದ ನಾವು ಎಚ್ಚರದಿಂದಿರಬೇಕು ಕೆಲವು ತಿಂಗಳ ಹಿಂದೆ ಬಂದ ಅಲೆಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಎಲ್ಲರೂ ಓಮಿಕ್ರಾನ್ ಅನ್ನು ಯಶಸ್ವಿಯಾಗಿ ನಿಭಾಯಿಸಿದರು, ಹೋರಾಡಿದರು. ಎರಡು ವರ್ಷಗಳಲ್ಲಿ, ದೇಶವು ಆರೋಗ್ಯ ಮೂಲಸೌಕರ್ಯದಿಂದ ಆಮ್ಲಜನಕದವರೆಗೆ ಕೆಲಸ ಮಾಡಿದೆ.
ವ್ಯಾಕ್ಸಿನೇಷನ್ ನಿಂದಾಗಿ ಮೂರನೇ ಅಲೆಯಲ್ಲಿ ಪರಿಸ್ಥಿತಿ ಹದಗೆಡಲಿಲ್ಲ. ಲಸಿಕೆ ಪ್ರತಿ ರಾಜ್ಯದ ಜನರನ್ನು ತಲುಪಿದೆ. ಇಂದು ಶೇಕಡಾ 96 ರಷ್ಟು ಜನಸಂಖ್ಯೆಯು ಮೊದಲ ಡೋಸ್ ಅನ್ನು ಪಡೆದಿದೆ, 15 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 85 ರಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.